2 ಬಿಜೆಪಿ ಶಾಸಕರ ಬಂಧನ !! ಸಿದ್ದರಾಮಯ್ಯ ಅವರ ಮಾತಿಗೆ ಬೆಲೆ ಕೊಡುತ್ತಾರ ಯಡಿಯೂರಪ್ಪ ??


ಬಿಜೆಪಿ ಶಾಸಕರಾರ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ರೇಣುಚಾರ್ಯರನ್ನು ಇಬ್ಬರನ್ನು ಕೂಡಾ ಬಂಧಿಸಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಿದ್ಧರಾಮಯ್ಯನವರು ಸರಣಿ ಟ್ವೀಟ್ ಗಳನ್ನು ಮಾಡಿದ್ದು, ಅದರಲ್ಲಿ ಒಂದು ಟ್ವೀಟ್ ನಲ್ಲಿ ಈ ಇಬ್ಬರೂ ಕೂಡಾ ನೀಡುತ್ತಿರುವ ಹೇಳಿಕೆಗಳು ಕೋಮು ಗಲಭೆಗಳಿಗೆ ಪ್ರಚೋದನೆ ನೀಡುವಂತಿದೆ ಎಂದಿರುವ ಸಿದ್ಧರಾಮಯ್ಯನವರು ಒಗ್ಗಟ್ಟಾಗಿ ಹೋರಾಟ ಮಾಡಬೇಕಾದ ಸಂದರ್ಭದಲ್ಲಿ ಇಂತಹ ಧರ್ಮದ ರಾಜಕಾರಣ ಮಾಡುವುದು ಅಮಾನವೀಯ ಎಂದು ಅವರು ತಮ್ಮ ಟ್ವೀಟ್ ನಲ್ಲಿ ಬರೆದಿದ್ದಾರೆ.


Siddaramaiah

@siddaramaiah
 ರೇಣುಕಾಚಾರ್ಯ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಕೋಮುಗಲಭೆಗೆ ಪ್ರಚೋದನೆ ನೀಡುವಂತಿದೆ. ಈ ಇಬ್ಬರ ಮೇಲು ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ತಕ್ಷಣ ಬಂಧಿಸಬೇಕು. ಕೊರೊನಾ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಾದ ಇಂತಹ ಸಂದರ್ಭದಲ್ಲಿ ಧರ್ಮರಾಜಕಾರಣ ಮಾಡುವುದು ಅಮಾನವೀಯ. 4/7#COVID

1,579
3:23 PM - Apr 8, 2020
Twitter Ads info and privacy
463 people are talking about this
ಸಿದ್ಧರಾಮಯ್ಯನವರು ಮಾಡಿರುವ ಟ್ವೀಟ್ ನಲ್ಲಿ ಅವರು ಹೇಳಿರುವ ವಿಷಯ ಈ ರೀತಿಯಾಗಿದೆ.
“ರೇಣುಕಾಚಾರ್ಯ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಕೋಮುಗಲಭೆಗೆ ಪ್ರಚೋದನೆ ನೀಡುವಂತಿದೆ. ಈ ಇಬ್ಬರ ಮೇಲು ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ತಕ್ಷಣ ಬಂಧಿಸಬೇಕು. ಕೊರೊನಾ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಾದ ಇಂತಹ ಸಂದರ್ಭದಲ್ಲಿ ಧರ್ಮರಾಜಕಾರಣ ಮಾಡುವುದು ಅಮಾನವೀಯ.” ಎಂದು ಟ್ವೀಟ್ ಮಾಡಿದ್ದಾರೆ ಸಿದ್ಧರಾಮಯ್ಯನವರು.
ಅಲ್ಲದೆ ರೇಣುಕಾಚಾರ್ಯ ಅವರು ಬರೀ ಶಾಸಕರಲ್ಲ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ. ಅವರು ನೀಡುವ ಪ್ರತಿ ಹೇಳಿಕೆ ಮುಖ್ಯಮಂತ್ರಿಗಳ ಹೇಳಿಕೆಯಷ್ಟೇ ಮಹತ್ವ ಹೊಂದಿರುತ್ತೆ.


Siddaramaiah

@siddaramaiah
 ರೇಣುಕಾಚಾರ್ಯ ಅವರು ಬರೀ ಶಾಸಕರಲ್ಲ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ. ಅವರು ನೀಡುವ ಪ್ರತಿ ಹೇಳಿಕೆ ಮುಖ್ಯಮಂತ್ರಿಗಳ ಹೇಳಿಕೆಯಷ್ಟೇ ಮಹತ್ವ ಹೊಂದಿರುತ್ತೆ. ಹಾಗಾಗಿ ಕೀಳು ಮಟ್ಟದ ಹೇಳಿಕೆ ನೀಡುವವರು ಅಂತಹ ಹುದ್ದೆಯಲ್ಲಿ ಮುಂದುವರೆಯಲು ಅರ್ಹರಲ್ಲ. ಅವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕು. 5/7#COVID

757
3:26 PM - Apr 8, 2020
Twitter Ads info and privacy
195 people are talking about this
ಹಾಗಾಗಿ ಕೀಳು ಮಟ್ಟದ ಹೇಳಿಕೆ ನೀಡುವವರು ಅಂತಹ ಹುದ್ದೆಯಲ್ಲಿ ಮುಂದುವರೆಯಲು ಅರ್ಹರಲ್ಲ. ಅವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕು.” ಎಂದು ಕೂಡಾ ಆಗ್ರಹಿಸಿದ್ದಾರೆ. ಇದಲ್ಲದೆ ಅವರು ಇದ್ದಕ್ಕಿದ್ದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಬಗ್ಗೆ, ಅದರಿಂದ ಬಡಜನರಿಗೆ ಸಮಸ್ಯೆಯಾಗಿರುವ ವಿಚಾರ, ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾಗಿ, ವಿಧಾನ ಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ಸಂಬಳ ಕಡಿತದ ಕುರಿತಾಗಿ ಮುಖ್ಯಮಂತ್ರಿ ಅವರು ಕರೆ ಮಾಡಿದ್ದ ವಿಚಾರ ಹೀಗೆ ಅನೇರ ವಿಚಾರಗಳ ಕುರಿತಾಗಿಯೂ ಟ್ವೀಟ್ ಮಾಡಿದ್ದಾರೆ.

Comments

  1. ದೇಶದ್ರೋಹಿ ಗಳನ್ನು ಸಮರ್ಥಿಸುವವರು ರಾಜಕೀಯ ದಲ್ಲಿ ಇರಲು ಯೋಗ್ಯರಲ್ಲ

    ReplyDelete

Post a Comment