ಬ್ರೇಕಿಂಗ್ ನ್ಯೂಸ್ !! ಮೋದಿ ಇರೋ ಕಾರಣ ಭಾರತ ಸುಭದ್ರವಾಗಿದೆ, ನಾನು ಯಾವತ್ತೂ ಮೋದಿ ಜೊತೆ ಇದ್ದೇನೆ ಎಂದ ಡಿಕೆ ಶಿವಕುಮಾರ್


ಸಿಎಂ ಯಡಿಯೂರಪ್ಪ ಅವರಿಗೆ ಭಯ ಹುಟ್ಟಿಸಿದ ಕಾಂಗ್ರೆಸ್ ಪಕ್ಷದ 20 ವರ್ಷದ ಮರಿ ಸಿದ್ದು

ದೇಶದಾದ್ಯಂತ ಸೋಂಕಿತರ ಸಂಖ್ಯೆ ದಿನದಿನಕ್ಕೆ ಏರುತ್ತಲೇ ಇದೆ. ದೇಶಾದ್ಯಂತ 300ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢವಾಗಿದೆ. ಮಹಾರಾಷ್ಟ್ರದಲ್ಲಂತೂ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರುತ್ತಲೇ ಇದ್ದು, ಒಟ್ಟು 65ಕ್ಕೇರಿದೆ.
 ಇನ್ನು ಕರ್ನಾಟಕದಲ್ಲಿ ಶನಿವಾರ ಒಂದೇ ದಿನ 5 ಜನರಿಗೆ ಕೊರೋನಾ ಇರುವುದು ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.ಮತ್ತೊಂದೆಡೆ  ಡೆಡ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಳಗ್ಗೆ 7 ರಿಂದ ಸಂಜೆ 7ರ ವರೆಗೆ ಜನತಾ ಕರ್ಫ್ಯೂ ಪಾಲಿಸುವಂತೆ ದೇಶದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ದೇಶದಾದ್ಯಂತ ಪಕ್ಷಾತೀತವಾಗಿ ವ್ಯಾಪಕ ಬೆಂಬಲವಾಕ್ತ ವಾಗಿದೆ.
ಇನ್ನು ಈ ಬಗ್ಗೆ ಮಾತನಾಡಿದ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರಧಾನಿಯವರ ಭಾಷಣಕ್ಕೆ ನಮ್ಮ ಬೆಂಬಲವಿದೆ ಎಂದಿದ್ದಾರೆ.


ಕೊರೊನಾ ವೈರಸ್​ ಮಹಾಮಾರಿಯಾಗಿ ಕಾಡುತ್ತಿದೆ, ಎಲ್ಲರೂ ಒಟ್ಟಾಗಿ ಸೇರಿ ಇದನ್ನ ಎದುರಿಸಬೇಕಿದೆ. ತಡವಾಯಿತೋ ಇಲ್ಲವೇ ಬೇಗ ಆಯ್ತೋ ಗೊತ್ತಿಲ್ಲ. ಆದರೆ ಜಾಗೃತಿ ಮೂಡಿಸುವ ಕೆಲಸ ಮಾಡ್ತಿದ್ದೇವೆ. ಜನತಾ ಕರ್ಫ್ಯೂ ಕುರಿತ ಪ್ರಧಾನಿಯವರ ಭಾಷಣಕ್ಕೆ ನಮ್ಮ ಬೆಂಬಲವಿದೆ. ನಮ್ಮ ಕಾಂಗ್ರೆಸ್ ಪಕ್ಷ ರೋಗ ನಿಯಂತ್ರಣಕ್ಕೆ ಬೇಕಾದ ಸಹಕಾರ ನೀಡುತ್ತದೆ ಎಂದರು.

ಜೊತೆಗೆ,  ರಾಜ್ಯದ ಜನರೂ ಸಹ ಕೈಜೋಡಿಸಬೇಕಿದೆ. ಕೊರೊನಾ ನಿಯಂತ್ರಣಕ್ಕಾಗಿಯೇ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಪ್ರಸ್ತುತ ಬಜೆಟ್​ ಅಧಿವೇಶನದಲ್ಲಿಯೇ ಈ ಪ್ಯಾಕೇಜ್​ನ್ನು ಘೋಷಿಸಬೇಕು. ಯಾವುದರಲ್ಲಿ ಕಡಿಮೆ ಮಾಡಿದರೂ ಸರಿಯೇ. ಎಲ್ಲ ಸಾಮಾನ್ಯ ವರ್ಗದ ಪರವಾಗಿ ಸರ್ಕಾರ ನಿಲ್ಲಬೇಕು ಎಂದು ಡಿಕೆಎಸ್​ ಇದೇ ವೇಳೆ ರಾಜ್ಯ ಸರ್ಕಾರಕ್ಕೂ ಮನವಿ ಮಾಡಿದರು.

ಬ್ರೇಕಿಂಗ್ ನ್ಯೂಸ್ !! ಮೋದಿ ಇರೋ ಕಾರಣ ಭಾರತ ಸುಭದ್ರವಾಗಿದೆ,  ನಾನು ಯಾವತ್ತೂ ಮೋದಿ ಜೊತೆ ಇದ್ದೇನೆ ಎಂದ ಡಿಕೆ ಶಿವಕುಮಾರ್

Comments

  1. ಆದರೆ ,ಡಿ.ಕೆ.ಶಿ ಯವರೇ ನಿಮ್ಮ ಪಕ್ಷದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಜನತಾ ಕರ್ಫ್ಯೂ ಧಿಕ್ಕರಿಸಿ ಅದೇನೋ ಸಂತೋಷಕೂಟದಲ್ಲಿ‌ ಭಾಗವಹಿಸಿದರಲ್ಲವೇ?ಅದೆಷ್ಟೋ ಮಂದಿ ಇಂದು ಜರಗಬೇಕಾಗಿದ್ದ ಮದುವೆ,ಮುಂಜಿ,ಪಿತೃಕಾರ್ಯಗಳನ್ನು‌ಮುಂದೂಡಿರುವಾಗ ಆಕೆಯ ನಡೆ ಸಮರ್ಥನೀಯವೇ? ಜನತೆಯಿಂದ ಆರಿಸಲ್ಪಟ್ಟ ಜನತಾ ಪ್ರತಿನಿಧಿಯ ಈ ರೀತಿ‌ ಮಾಡಿಡ್ದು‌ ಖಂಡನಾರ್ಹವೆನಿಸುತ್ತಿಲ್ಲವೇ?ದೇಶ ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲಿ ಸಿಹಿತಿನ್ನುವ ಹಾಗೂ ತಿನ್ನಿಸುವ ಹಂಬಲದ ಗುಣ ನಾಚಿಕೆಗೇಡಿನ ವಿಚಾರ.

    ReplyDelete
  2. When entire nation is on janata curfew,Laxmi hebbalkar celebrating sweet party,an irresponsible citizen of India,and shame

    ReplyDelete

Post a Comment