ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುಣ್ಯತಿಥಿಯ ಅಂಗವಾಗಿ ಎಬಿವಿಪಿ ಪುತ್ತೂರು ವತಿಯಿಂದ ಸಾಮಾಜಿಕ ಸಾಮರಸ್ಯ ದಿನ ಆಚರಣೆ
ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುಣ್ಯತಿಥಿಯ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ವತಿಯಿಂದ ಸಾಮಾಜಿಕ ಸಾಮರಸ್ಯ ದಿನ ಕಾರ್ಯಕ್ರಮವನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮತ್ತು ಗೀತೆಯ ಮೂಲಕ ಪ್ರಾರಂಭಿಸಲಾಯಿತು.
ಈ ಸಂದರ್ಭ ಎಬಿವಿಪಿಯ ಹಿರಿಯ ಕಾರ್ಯಕರ್ತರಾದ ಸಂದೇಶ್ ರೈ ಮಜಕ್ಕಾರ್ ಅವರು ಪ್ರಾಸ್ತಾವಿಕ ನುಡಿಯನ್ನು ಆಡಿದರು ಮಂಗಳೂರು ವಿಭಾಗ ಪ್ರಮುಖರಾದ ಕೇಶವ ಬಂಗೇರ ಇವರು ಮುಖ್ಯ ವಕ್ತಾರರಾಗಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಗಾಯತ್ರಿ ಸಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು ವೇದಿಕೆಯಲ್ಲಿ ಎಬಿವಿಪಿ ಪುತ್ತೂರು ನಗರ ಅಧ್ಯಕ್ಷರಾದ ಪ್ರಸಾದ್ ಶ್ಯಾನಭಾಗ್ ,ನಗರ ಕಾರ್ಯದರ್ಶಿ ಜಗದೀಶ್ ಕಾಪಾರು ಇದರು ಹಾಗೂ ಕಾರ್ಯಕ್ರಮದಲ್ಲಿ ಎಬಿವಿಪಿ ಪುತ್ತೂರು ಜಿಲ್ಲಾ ಅಧ್ಯಕ್ಷರದ ಸುಬ್ರಹ್ಮಣ್ಯ ಪ್ರಮುಖರಾದ ಕಾರ್ತಿಕ್ ಪಂಜ , ವಚನ್ ಶೆಟ್ಟಿ ,ಆಶಿಶ್, ಪ್ರೀತೇಶ್,ಮುಕೇಶ್,ಸುಜನ್ ಗೌಡ, ವತನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ಮಂಜುನಾಥ್ ಹಾಗೂ ಕಾರ್ತಿಕ್ ಸ್ವಾಗತಿಸಿ ಭವಿಷ್ಯತ್ ವಂದಿಸಿದರು.
Comments
Post a Comment