ಪ್ರಧಾನಿಯನ್ನು ಭೇಟಿ ಮಾಡಿದ ತಕ್ಷಣ ಬಿಜೆಪಿಗೆ ಹೋಗುತ್ತೇವೆ ಎಂದಲ್ಲ: ಎಚ್‌.ಡಿ.ದೇವೇಗೌಡ


ಪ್ರಧಾನಿಯನ್ನು ಭೇಟಿ ಮಾಡಿದ ತಕ್ಷಣ ಬಿಜೆಪಿಗೆ ಹೋಗುತ್ತೇವೆ ಎಂದಲ್ಲ: ಎಚ್‌.ಡಿ.ದೇವೇಗೌಡ

ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ತಕ್ಷಣ ನಾವು ಬಿಜೆಪಿಗೆ ಹೊಗುತ್ತೇವೆ ಎಂದಲ್ಲ. ಹಾಸನ ಹಾಗೂ ರಾಜ್ಯದ ಅಭಿವೃದ್ಧಿ ವಿಚಾರವಾಗಿ ಪ್ರಧಾನಿಯವರಲ್ಲಿ ಚರ್ಚಿಸೋಕೆ ಹೋಗಿದ್ದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಎಚ್‌.ಡಿ.ದೇವೇಗೌಡ ಮತ್ತು ಪ್ರಧಾನಿ ಮೋದಿ ಭೇಟಿ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು. ದೇವೇಗೌಡ, ಮೋದಿ ಭಾಯಿಭಾಯಿ ಎಂದು ಸಿದ್ದರಾಮಯ್ಯ ಟೀಕಿಸಿದ್ದರು. ಸಿದ್ದು ಟೀಕೆಗೆ ತಿರುಗೇಟು ನೀಡಿರುವ ಎಚ್‌.ಡಿ.ದೇವೇಗೌಡ, ಪ್ರಧಾನ ಮಂತ್ರಿಯವರನ್ನು ನಾನು ಸಾಕಷ್ಟು ಸಲ ಭೇಟಿ ಮಾಡಿದ್ದೇನೆ. ಮನಮೋಹನ್ ಸಿಂಗ್, ವಾಜಪೇಯಿ ಅವರನ್ನೂ ಭೇಟಿ ಮಾಡಿದ್ದೆ. ನಾನು ಒಳಗೆ ಹೊರಗೆ ರಾಜಕೀಯ ಮಾಡೋ ಪ್ರಶ್ನೆ ಬೇರೆ. ಪ್ರಧಾನಿ ಭೇಟಿ ಮಾಡೋಕೆ ಸಿದ್ದರಾಮಯ್ಯ ಪರ್ಮಿಷನ್ ತಗೊಂಡು ಹೋಗಬೇಕಾ ಎಂದು ಪ್ರಶ್ನಿಸಿದ್ದಾರೆ. 
 

Comments