ಪ್ರಾದೇಶಿಕ ಪಕ್ಷದ ಹೆಸರಿನಲ್ಲಿ ಕರ್ನಾಟಕದಲ್ಲ್ ಹಲವಾರು ಬಾರಿ ಅಧಿಕಾರದ ಗದ್ದುಗೆ ಏರಿರುವ ಜೆಡಿಎಸ್ ಪಕ್ಷ ರಾಜ್ಯದಲ್ಲಿ ತನ್ನದೇ ಅದ ಜನಬೆಂಬಲ ಹಾಗೂ ಐತಿಹ್ಯವನ್ನು ಒಳಗೊಂಡಿದೆ. ಮಾತ್ರವಲ್ಲದೆ ಕೆಲವಾರು ಚುನಾವಣೆಗಳ ಮೂಲಕ ಐತಿಹಾಸಿಕ ದಾಖಲೆ ಹಾಗೂ ಉತ್ತಮ ಅಡಳಿತವನ್ನು ನೀಡಿದ ಕೀರ್ತಿ ಜೆಡಿಎಸ್ ಗೆ ಸಲ್ಲುತ್ತದೆ. ಮಾತ್ರವಲ್ಲದೆ ಕರ್ನಾಟಕದ ಜನರಿಗೆ ಅಲ್ಪ ಸಮಯದಲ್ಲಿ ಸ್ವಚ್ಚ ಆಡಳಿತವನ್ನು ನೀಡಿದ ಕೀರ್ತಿ ಜೆಡಿಎಸ್ ಗೆ ಸಲ್ಲುತ್ತದೆ.
ಜೆಡಿಎಸ್ ತನ್ನ ಅಧಿಕಾರ ಸಂಧರ್ಭದಲ್ಲಿ ಉತ್ತಮ ಕೆಲಸಗಳ ನಿರ್ವಹಣೆಗೆ ಹೆಚ್ಚು ಮಹತ್ವ ನೀಡಿದೆ. ಈ ಮೂಲಕ ಜೆಡಿಎಸ್ ರಾಜ್ಯದ ಉಳಿತಿಗಾಗಿ ಹೆಚ್ಚಿನ ಮಹತ್ವ ನೀಡುತ್ತಾ ಬಂದಿದೆ. ಸದ್ಯ ಜೆಡಿಎಸ್ ರಾಜ್ಯದಲ್ಲಿ ಐತಿಹಾಸಿಕ ದಾಖಲೆಯೊಂದನ್ನು ಬರೆಯುವ ಮೂಲಕ ಎಲ್ಲಾರ ಮೆಚ್ಚುಗೆಗೆ ಪಾತ್ರವಾಗಿದೆ. ಮಾತ್ರವಲ್ಲದೆ ಜೆಡಿಎಸ್ ತನ್ನ ಆಸ್ತಿತ್ವವನ್ನು ಮತ್ತೊಮ್ಮೆ ಸಾಭೀತುಪಡಿಸಿದೆ. ಈ ಮೂಲಕ ಜನರ ವಿಶ್ವಾಸ ತಮ್ಮ ಪಕ್ಷಕ್ಕೆ ಈಗಲೂ ಇದೆ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದಂತಾಗಿದೆ. ಈ ಎಲ್ಲಾ ಮಾತುಗಳನ್ನು ಹೇಳಲು ಪ್ರಮುಖ ಕಾರಣ ಸಾಲಿಗ್ರಾಮದ ಹಾಲು ಉತ್ಪಾದಕರ ಪ್ರತಿಷ್ಠಿತ ಸಂಘದಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಆಭ್ಯರ್ಥಿಗಳು ಜಯ ಗಳಿಸುವ ಮೂಲಕ ದಾಖಲೆಯ ಗೆಲುವನ್ನು ಜೆಡಿಎಸ್ ಪಡೆದಿದೆ.
ಹೌದು, ಸಾಲಿಗ್ರಾಮದಲ್ಲಿ ನಡೆದ ೧೩ ಸ್ಥಾನಗಳ ಚುನಾವಾಣೆಯಲ್ಲಿ ಜೆಡಿಎಸ್ ನ ಎಲ್ಲಾ ಆಭ್ಯರ್ಥಿಗಳು ಭರ್ಜರಿ ಜಯ ಗಳಿಸಿದ್ದಾರೆ. ಮಹಿಳಾ ಸ್ಥಾನಗಳ ಹಾಗೂ ಹಿಂದುಳಿದ ವರ್ಗಗಳ ಎಲ್ಲಾ ಆಭ್ಯರ್ಥಿಗಳು ಜಯ ಗಳಿಸುವ ಮೂಲಕ ಈ ದಾಖಲೆ ಮಾಡಿದೆ. ಒಟ್ಟಾರೆಯಾಗಿ ಜೆಡಿಎಸ್ ನ ತಾಕತ್ತು ಏನು ಎಂಬುದು ಮತ್ತೊಮ್ಮೆ ಸಾಭೀತಾಗಿದೆ.

Comments
Post a Comment