ಒಂದು ಗುಂಪಿನ ರೈತರು ಬಿಜೆಪಿ ಶಾಸಕರೊಬ್ಬರನ್ನು ಹಿಡಿದು ಥಳಿಸಿದ್ದಲ್ಲದೆ, ಬಟ್ಟೆ ಹರಿದು ಹಾಕಿ ಅವರ ಮೇಲೆ ಕಪ್ಪು ಮಸಿ ಸುರಿದಿರುವ ಘಟನೆ ಪಂಜಾಬ್ನ ಮುಕ್ತ್ಸರ್ ಜಿಲ್ಲೆಯ ಮಲೌತ್ನಲ್ಲಿ ಶನಿವಾರ ನಡೆದಿದೆ. ಅಬೊಹರ್ ಕ್ಷೇತ್ರದ ಬಿಜೆಪಿ ಶಾಸಕ ಅರುಣ್ ನಾರಂಗ್ ಸೇರಿದಂತೆ ಇತರೆ ಸ್ಥಳೀಯರ ನಾಯಕರನ್ನು ಪ್ರತಿಭಟನಾನಿರತ ರೈತರ ಗುಂಪೊಂದು ಸುತ್ತುವರೆದು ಥಳಿಸಿದ್ದಾರೆ. ಶಾಸಕರು ಮಲೌತ್ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸುವಾಗ ಈ ದುರ್ಘಟನೆ ನಡೆದಿದೆ.
ಅರುಣ್ ನಾರಂಗ್ ಆಗಮನಕ್ಕಾಗಿ ಪ್ರತಿಭಟನಾಕಾರರು ಮೊದಲೇ ಬಿಜೆಪಿ ಕಚೇರಿಯ ಬಳಿ ಕಾಯುತ್ತಿದ್ದರು. ನಾರಂಗ್ ಬರುತ್ತಿದ್ದಂತೆ ಅವರ ಮೇಲೆ ಕಪ್ಪು ಮಸಿ ಎಸೆದಿದ್ದಾರೆ. ಅಲ್ಲದೆ, ಅವರ ಕಾರನ್ನು ಸಹ ಕಪ್ಪು ಕಲೆಯುಕ್ತ ಮಾಡಿದರು. ಈ ವೇಳೆ ಸ್ಥಳದಲ್ಲಿದ್ದ ಕೆಲ ಪೊಲೀಸರು ಶಾಸಕರು ಮತ್ತು ಸ್ಥಳೀಯ ನಾಯಕರುಗಳನ್ನು ಹತ್ತಿರದ ಅಂಗಡಿಯೊಂದಕ್ಕೆ ಕರೆದೊಯ್ದರು. ತದನಂತರದಲ್ಲಿ ಅಂಗಡಿಯಿಂದ ಹೊರಬಂದಾಗ ಅರುಣ್ ನಾರಂಗ್ ಮತ್ತವರ ಬೆಂಬಲಿಗರನ್ನು ಹಿಡಿದು ರೈತರು ಥಳಿಸಿ, ಬಟ್ಟೆ ಹರಿದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಹೇಗೋ ಕೊನೆಯಲ್ಲಿ ನಾರಂಗ್ ಅವರನ್ನು ಪೊಲೀಸರು ರೈತರ ಗುಂಪಿಂದ ರಕ್ಷಣೆ ಮಾಡಿ ಕರೆದೊಯ್ದರು. ಘಟನೆ ಸಂಬಂಧಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಂಡೀಗಢ: ಒಂದು ಗುಂಪಿನ ರೈತರು ಬಿಜೆಪಿ ಶಾಸಕರೊಬ್ಬರನ್ನು ಹಿಡಿದು ಥಳಿಸಿದ್ದಲ್ಲದೆ, ಬಟ್ಟೆ ಹರಿದು ಹಾಕಿ ಅವರ ಮೇಲೆ ಕಪ್ಪು ಮಸಿ ಸುರಿದಿರುವ ಘಟನೆ ಪಂಜಾಬ್ನ ಮುಕ್ತ್ಸರ್ ಜಿಲ್ಲೆಯ ಮಲೌತ್ನಲ್ಲಿ ಶನಿವಾರ ನಡೆದಿದೆ.
ಚಂಡೀಗಢ: ಒಂದು ಗುಂಪಿನ ರೈತರು ಬಿಜೆಪಿ ಶಾಸಕರೊಬ್ಬರನ್ನು ಹಿಡಿದು ಥಳಿಸಿದ್ದಲ್ಲದೆ, ಬಟ್ಟೆ ಹರಿದು ಹಾಕಿ ಅವರ ಮೇಲೆ ಕಪ್ಪು ಮಸಿ ಸುರಿದಿರುವ ಘಟನೆ ಪಂಜಾಬ್ನ ಮುಕ್ತ್ಸರ್ ಜಿಲ್ಲೆಯ ಮಲೌತ್ನಲ್ಲಿ ಶನಿವಾರ ನಡೆದಿದೆ. #ProtestingFarmers #BJPMLA #Punjab #Attack pic.twitter.com/e1eexbyXQ1
— Vijayavani (@VVani4U) March 28, 2021
Comments
Post a Comment