Breaking news !! ಯಡಿಯೂರಪ್ಪ ಅವರ ಕಾರ್ಯಕ್ಕೆ ಮೆಚ್ಚಿ ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ ಆಪ್ತ ಸ್ನೇಹಿತ ಇಂದು ಬೆಳಗ್ಗೆ ಜೆಡಿಎಸ್ ಬಿಟ್ಟು ಬಿಜೆಪಿ ಸೇರ್ಪಡೆ
ಕುಂಬಳಗೋಡು ಜಿಲ್ಲಾ ಪಂಚಾಯ್ತಿ ಜೆಡಿಎಸ್ ಅಧ್ಯಕ್ಷ ಎನ್.ನರಸಿಂಹಮೂರ್ತಿ, ಗ್ರಾ.ಪಂ. ಸದಸ್ಯರಾದ ನಾಗರತ್ನ ಲೋಕೇಶ್ ಕೆ.ಎನ್.ಮಂಜುನಾಥ್, ಶಕುಂತಲವೀರಭದ್ರಪ್ಪ ಮತ್ತಿತರರು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಜಿ.ಪಂ.ಸದಸ್ಯ ನರಸಿಂಹಮೂರ್ತಿ ಮಾತನಾಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಸಮಗ್ರ ಅಭಿವೃದ್ಧಿಗಾಗಿ ಅನುದಾನವನ್ನು ಕೇಳಿದ್ದರಿಂದ ಸಚಿವರು ಸಾಕಷ್ಟು ಅನುದಾನ ನೀಡಿದ್ದರಿಂದ ಮತ್ತು ಎಲ್ಲಾ ಜನಾಂಗದವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಸೋಮಶೇಖರ್ ಅವರ ನಾಯಕತ್ವ ಮೆಚ್ಚಿಕೊಂಡಿದ್ದು, ನರೇಂದ್ರಮೋದಿಯವರ ಅಭಿವೃದ್ಧಿ ಕಾರ್ಯಕ್ರಮಗಳು, ಕಾರ್ಯವೈಖರಿ ಮತ್ತು ಬಿಜೆಪಿ ಸಿದ್ಧಾಂತವನ್ನು ದಿನನಿತ್ಯ ನೋಡುತ್ತಿರುವ ನಾನು ಎಸ್.ಟಿ.ಸೋಮಶೇಖರ್ ಅವರು ಕ್ಷೇತ್ರದ ಮೂಲೆಮೂಲೆಗೆ ತೆರಳಿ ಅಭಿವೃದ್ಧಿ ಕೆಲಸ ಮಾಡುತ್ತಿರುವುದನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದರು.
ಯಶವಂತಪುರ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಎಂ.ರಂಗರಾಜು, ಉಪಾಧ್ಯಕ್ಷ ತಾತಗುಣಿ ಎ.ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಆರ್.ಪಿ.ಪ್ರಕಾಶ್, ಹಿರಿಯ ಮುಖಂಡ ವಿ.ನಂಜಪ್ಪ, ಪಾಲಿಕೆ ಸದಸ್ಯ ರಾಜಣ್ಣ, ಗ್ರಾ.ಪಂ. ಮಾಜಿ ಅಧ್ಯಕ್ಷ ಚಿಕ್ಕರಾಜು, ತಾ.ಪಂ. ಮಾಜಿ ಅಧ್ಯಕ್ಷ ಬಿ.ಕೃಷ್ಣಪ್ಪ ಇದ್ದರು.

Comments
Post a Comment