ಸ್ಫೋಟಕ ಸುದ್ದಿ !! ಕರ್ನಾಟಕ ಬಿಜೆಪಿ ಸರ್ಕಾರ ಪತನದತ್ತಾ ,ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಮೋದಿ ಆಪ್ತ, ಬಿಜೆಪಿ ಸರ್ಕಾರ ಬೀಳೋದು ಪಕ್ಕಾ



ಅಸಲಿಗೆ ಭಿನ್ನಮತ, ಪಕ್ಷದೊಳಗಿನ ಬೇಗುದಿ ಎಂಬುದು ಬಿಜೆಪಿ ಪಾಲಿಗೆ ಹೊಸತೇನಲ್ಲ. 2008 ರಿಂದ 2013 ನಡುವಿನ 5 ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಆಡಳಿತ ನಡೆಸಿದ ವಿಧಾನವನ್ನು ಬಲ್ಲವರಿಗೆ ಈ ಕುರಿತು ಹೆಚ್ಚೇನೂ ಪೀಠಿಕೆಯ ಅಗತ್ಯವೂ ಇಲ್ಲ. ರಾಜ್ಯ ರಾಜಕೀಯ ಇತಿಹಾಸದಲ್ಲಿ ರಾಷ್ಟ್ರೀಯ ಪಕ್ಷವೊಂದು ಭಿನ್ನಮತ, ಒಳಬೇಗುದಿಯೊಂದಿಗೆ ಒಂದೇ ಅವಧಿಗೆ 3 ಮುಖ್ಯಮಂತ್ರಿ ಹಾಗೂ 2 ಉಪ ಮುಖ್ಯಮಂತ್ರಿಯನ್ನು ಕಾಣಬೇಕಾಯಿತು. ಅಲ್ಲದೆ, ಭ್ರಷ್ಟಾಚಾರದ ಆರೋಪ ಹೊತ್ತು ಸ್ವತಃ ಮುಖ್ಯಮಂತ್ರಿಯೇ ಜೈಲು ಪಾಲಾದ ಅಪಖ್ಯಾತಿಗೂ ಅಂದಿನ ಬಿಜೆಪಿ ಸರ್ಕಾರ ಒಳಗಾಗಿತ್ತು.
ಪಕ್ಷಗಳೊಳಗಿನ ಆಂತರಿಕ ಅಸಮಾಧಾನ, ಭಿನ್ನಮತಕ್ಕೂ ರಾಜ್ಯ ರಾಜಕಾರಣಕ್ಕೂ ಎಲ್ಲಿಲ್ಲದ ನಂಟಿದೆ. 2018ರ ವಿಧಾನಸಭಾ ಚುನಾವಣೆಯ ನಂತರ ಒಲ್ಲದ ಮನಸ್ಸಿನಿಂದಲೇ ಮೈತ್ರಿ ಸಾಧಿಸಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಭಿನ್ನಮತದ ನಡುವೆಯೇ 14 ತಿಂಗಳ ಆಡಳಿತ ನಡೆಸಿತ್ತು. ಕೊನೆಗೆ ಸರ್ಕಾರದ ಪತನಕ್ಕೂ ಈ ಭಿನ್ನಮತವೇ ಕಾರಣವಾಗಿತ್ತು ಎಂಬುದು ಇತಿಹಾಸ.
ಬಿಜೆಪಿ ಪಾಳಯದಲ್ಲಿ ಬಿ.ಎಸ್. ಯಡಿಯೂರಪ್ಪ ಸಾಲಿನಲ್ಲಿ ಕಾಣಿಸಿಕೊಳ್ಳುವ ಮೊದಲ ಹಂತದ ನಾಯಕರ ಪೈಕಿ ಕೆ.ಎಸ್. ಈಶ್ವರಪ್ಪನವರ ಹೆಸರು ಅಗ್ರಸಾಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ಇಬ್ಬರೂ ಒಟ್ಟಾಗಿ ಪಕ್ಷ ಸಂಘಟಿಸಿ ಪಕ್ಷವನ್ನು ಅಧಿಕಾರದ ಗದ್ದುಗೆಗೆ ಏರಿಸಿದ ಹಿರಿಯ ನಾಯಕರು ಎಂಬುದಲ್ಲಿ ಎರಡು ಮಾತಿಲ್ಲ. ಆದರೆ, ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಎಂಬ ಪಕ್ಷವನ್ನು ಸ್ಥಾಪಿಸಿ 2013ರ ಚುನಾವಣಾ ಕಣಕ್ಕೆ ಧುಮುಕಿದಾಗ ಶಿವಮೊಗ್ಗದಲ್ಲಿ ಸ್ವತಃ ಈಶ್ವರಪ್ಪನವರ ಸೋಲಿಗೆ ಕಾರಣರಾಗಿದ್ದರು.
ಯಡಿಯೂರಪ್ಪನವರ ಕೋರಿಕೆಯಂತೆ ಕೊನೆಗೂ ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಕೈಬಿಡುವಂತೆ ಮಾಡುವಲ್ಲಿ ಬಿಜೆಪಿ ಹೈಕಮಾಂಡ್ ಯಶಸ್ವಿಯಾಗಿದ್ದರೂ, ಬಿಜೆಪಿ ಪಾಲಿಗೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ಎಂಬ ನಾಯಕರು ಪರಸ್ಪರ ವಿರೋಧ ಧಿಕ್ಕಿಗೆ ಸರಿದಿದ್ದರು.
ಇತ್ತ ಆಪರೇಷನ್ ಕಮಲದ ಹೆಸರಿನಲ್ಲಿ ಯಡಿಯೂರಪ್ಪ ಕಾಂಗ್ರೆಸ್-ಜೆಡಿಎಸ್ ಸಚಿವರನ್ನು ಸೆಳೆದು ಸರ್ಕಾರ ಬೀಳಿಸಲು ಮುಂದಾಗಿದ್ದರೆ, ಅತ್ತ ಬಿ.ಎಲ್. ಸಂತೋಷ್ ಸ್ವಂತ ಪಕ್ಷದ 40 ಜನ ಶಾಸಕರನ್ನೇ ಗೋವಾಗೆ ಕರೆದೊಯ್ಯುವ ಮೂಲಕ ಯಡಿಯೂರಪ್ಪನವರಿಗೆ ಟಾಂಗ್ ನೀಡಿದ್ದರು. ಈ ಮೂಲಕ ಬಿಜೆಪಿ ಪಾಳಯದ ಭಿನ್ನಮತ ಮತ್ತೊಂದು ಮಗ್ಗುಲು ಬದಲಿಸಿತ್ತು.ಕಳೆದ ಒಂದು ವರ್ಷದ ಹಿಂದಿನ ವರೆಗೆ ಜನರಿಗೆ ಅಷ್ಟಾಗಿ ಪರಿಚಯವಿಲ್ಲದ ಬಿ.ಎಲ್. ಸಂತೋಷ್ ಎಂಬ ಹೆಸರು ಕೆಲಕಾಲ ಸಿಎಂ ರೇಸ್ನಲ್ಲೂ ಕಾಣಿಸಿಕೊಂಡಿತ್ತು.
ಅಸಲಿಗೆ ಇಂದಿಗೂ ರಾಜ್ಯ ಬಿಜೆಪಿ ಪಾಳಯದ ಪ್ರಶ್ನಾತೀತ ನಾಯಕ ಎಂದರೆ ಬಿ.ಎಸ್. ಯಡಿಯೂರಪ್ಪ ಎಂಬುದರಲ್ಲಿ ಎರಡು ಮಾತಿಲ್ಲ. ವಯಸ್ಸು 75 ದಾಟಿದರೂ ಬಿಜೆಪಿ ಪಾಲಿಗೆ ನೆಚ್ಚಿನ ಸಿಎಂ ಅಭ್ಯರ್ಥಿ ಅವರು. ಆದರೆ, ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪನವರ ಏಳಿಗೆ ಸ್ವತಃ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ನರೇಂದ್ರ ಮೋದಿಗೆ ಇಷ್ಟ ಇಲ್ಲ ಎಂಬ ಮಾತು ಬಿಜೆಪಿ ಮೂಲಗಳಿಂದಲೇ ಕೇಳಿ ಬರುತ್ತದೆ. ಇದೇ ಕಾರಣಕ್ಕೆ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟವರು ಆರ್ಎಸ್ಎಸ್ ಹಿನ್ನೆಲೆಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್.

Comments