ಇದೀಗ ಬಂದ ಸುದ್ದಿ !! ಶಿರಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಪಕ್ಷದಿಂದ ಬಲಿಷ್ಠ ಅಭ್ಯರ್ಥಿ ಗೆ ಟಿಕೆಟ್, 10 ಸಾವಿರ ಮತಗಳ ಅಂತರದಿಂದ ಜಯಿಸುವೆ ಎಂದ ಅಭ್ಯರ್ಥಿ

ಇದೀಗ ಬಂದ ಸುದ್ದಿ !! ಶಿರಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಪಕ್ಷದಿಂದ ಬಲಿಷ್ಠ ಅಭ್ಯರ್ಥಿ ಗೆ ಟಿಕೆಟ್, 10 ಸಾವಿರ
ಮತಗಳ ಅಂತರದಿಂದ ಜಯಿಸುವೆ ಎಂದ ಅಭ್ಯರ್ಥಿ. ಯಾದವ(ಗೊಲ್ಲ) ಸಮುದಾಯದ ಮುಖಂಡ ಡಿ.ಟಿ.ಶ್ರೀನಿವಾಸ್‌ಗೆ ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ನೀಡಬೇಕು ಎಂದು ಯಾದವ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ. ಈ ಬಗ್ಗೆ ಡಿ.ಟಿ ಶ್ರೀನಿವಾಸ್ ಅವರು ಮಾಧ್ಯಮಗಳ ಮುಂದೆ ನನಗೆ  ಈ ಬಾರಿ ಅವಕಾಶ ನೀಡಿದರೆ ಖಂಡಿತ ಕಡಿಮೆ ಎಂದರು 10.000 ಮತಗಳ ಅಂತರದಿಂದ ಬಿಜೆಪಿ ಯನ್ನು ಗೆಲ್ಲಿಸುವೆ ಎಂದರು.

ಶಿರಾದ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ವಿವಿಧ ಸಮುದಾಯದ ಮುಖಂಡರು, ಬಿಜೆಪಿ ಕಾರ್ಯಕರ್ತರು ಸಭೆ ನಡೆಸಿ, ಯಾದವ (ಗೊಲ್ಲ) ಸಮುದಾಯವನ್ನು ಎಲ್ಲಾ ಪಕ್ಷಗಳು ಕಡೆಗಣಿಸಿವೆ. ಈ ಬಾರಿ ಶಿರಾ ತಾಲೂಕಿನ ಉಪಚುನಾವಣೆ ಇರುವುದರಿಂದ ಯಾದವ ಸಮುದಾಯದ ಡಿ.ಟಿ.ಶ್ರೀನಿವಾಸ್‌ಗೆ ಬಿಜೆಪಿ ಬಿ.ಫಾರಂ ನೀಡಬೇಕು ಎಂದು ಒತ್ತಾಯಿಸಿದರು.

ಪಾವಗಡ ತಾಲೂಕಿನವರಾದ ಡಿ.ಟಿ.ಶ್ರೀನಿವಾಸ್‌ ಕೆಎಎಸ್‌ ಅಧಿಕಾರಿಯಾಗಿ ಪೋಲಿಸ್‌, ಕಂದಾಯ, ಬಿಸಿಎಂ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ. ರಾಜ್ಯ ಮಟ್ಟದ ಯಾದವ(ಗೊಲ್ಲ) ಸಂಘ ಸ್ಥಾಪನೆ ಮಾಡಿದ್ದಾರೆ. ರಾಜ್ಯ ಬಿಜೆಪಿ ಪದಾಧಿಕಾರಿಯಾಗಿದ್ದು, ಇವರಿಗೆ ಶಿರಾ ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸಭೆಯಲ್ಲಿ ಈರೇಗೌಡ, ಲೋಕೇಶ್‌ ಹೆಂದೊರೆ, ಅಭಿ ಬೆಜ್ಜಿಹಳ್ಳಿ, ಮಂಜುನಾಥ ಬಡಮಂಗನಹಟ್ಟಿ, ವೀರೇಂದ್ರ, ಶ್ರೀಧರ ಕರಿರಾಮನಹಳ್ಳಿ, ಚಿಕ್ಕಣ್ಣ, ಮಂಜು ಚಂಗಾವರ, ಗಂಗಾಧರ, ಶಶಿ ವಾಜರಹಳ್ಳಿ, ಕಿರಣ್‌, ರವಿ ಯಾದವ್‌, ಕಾಂತರಾಜು ವಾಜರಹಳ್ಳಿ, ಮಂಜು ಯದವ್‌ ಕರಿರಾಮನಹಳ್ಳಿ ಮುಂತಾದವರು ಭಾಗವಹಿಸಿದ್ದರು.

Comments