ಬಿಜೆಪಿ ಜೊತೆ ಸೇರಿ ಪಿತೂರಿ ಮಾಡಿದ ರಾಹುಲ್ ಗಾಂಧಿ ಆಪ್ತ, ಕಾಂಗ್ರೆಸ್ ನಾಯಕ, ಕಾಂಗ್ರೆಸ್ ಮುಕ್ತ ಭಾರತಕ್ಕೆ ಕಾಂಗ್ರೆಸಿಗರಿಂದಲೇ ಚಾಲನೆ


ನವದೆಹಲಿ: ಪಕ್ಷದ ಸಂಘಟನಾತ್ಮಕ ಪುನಶ್ಚೇತನಕ್ಕೆ ಪತ್ರಬರೆದು ಕೇಳಿಕೊಂಡರೆ, ಪತ್ರ ಬರೆದ ಟೈಮಿಂಗ್​, ಸನ್ನಿವೇಶ ಎಲ್ಲ ಮುಂದಿಟ್ಟುಕೊಂಡು ನಮ್ ಮೇಲೆನೇ ಗೂಬೆ ಕೂರಿಸಿದ್ಯಲ್ಲಪ್ಪ.. ನಾವು ಬಿಜೆಪಿ ಜತೆ ಸೇರ್ಕೊಂಡು ಪಿತೂರಿ ಮಾಡ್ತಿದ್ದೀವಾ! ಹೀಗಂತ - ಹಿರಿಯ ನಾಯಕ ಕಪಿಲ್ ಸಿಬಲ್​ ಟ್ವೀಟ್ ಮಾಡಿ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಪಿಲ್ ಸಿಬಲ್ ತಮ್ಮ ಟ್ವೀಟ್​ನಲ್ಲಿ ಹೇಳಿಕೊಂಡಿರೋದಿಷ್ಟು - ರಾಹುಲ್ ಗಾಂಧಿ ಹೇಳ್ತಾರೆ ನಾವು ಬಿಜೆಪಿ ಜತೆ ಸೇರ್ಕೊಂಡು ಪಿತೂರಿ ನಡೆಸ್ತಿದ್ದೀವಂತೆ. ಹೀಗಾಗಿಯೆ ರಾಜಸ್ಥಾನ ಹೈಕೋರ್ಟ್​ನಲ್ಲಿ ಕಾಂಗ್ರೆಸ್ ಪಕ್ಷವನ್ನು ಡಿಫೆಂಡ್ ಮಾಡಿ ಯಶಸ್ವಿಯಾದ್ವಿ. ಮಣಿಪುರದಲ್ಲೂ ಪಕ್ಷವನ್ನು ಡಿಫೆಂಡ್ ಮಾಡ್ಕೊಂಡು ಬಿಜೆಪಿ ಸರ್ಕಾರ ಪತನವಾಗುವಂತೆ ನೋಡ್ಕೊಂಡ್ವಿ. ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಯಾವುದೇ ವಿಷಯದಲ್ಲೂ ಬಿಜೆಪಿ ಪರವಾಗಿ ಹೇಳಿಕೆ ನೀಡಿಲ್ಲ.
ಇಷ್ಟಾಗ್ಯೂ ನಾವು ಬಿಜೆಪಿ ಜತೆ ಸೇರಿ ಪಿತೂರಿ ಮಾಡ್ತೀದ್ದೇವೆ! '.

Comments