FACT CHECK !! ಪ್ರಿಯಾಂಕ ವಾದ್ರಗೆ ಮದುವೆ ಮಾಡಿಸಿದ್ದು ಮೌಲಿ !! ಮುಸ್ಲಿಂ ಸಾಂಪ್ರದಾಯ


ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್‌ ವಾದ್ರಾ ವಿವಾಹ ಮುಸ್ಲಿಂ ಸಂಪ್ರದಾಯಕ್ಕೆ ಅನುಗುಣವಾಗಿ ನಡೆದಿತ್ತು. ಮೌಲ್ವಿಯೇ ಮುಂದೆ ನಿಂತು ವಿವಾಹ ನೆರವೇರಿಸಿದ್ದರು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಾರ‍್ಯಕ್ರಮವೊಂದರಲ್ಲಿ ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರೊಟ್ಟಿಗೆ ಗಡ್ಡಧಾರಿಯಾಗಿರುವ ವ್ಯಕ್ತಿ ಕುಳಿತಿರುವ ಫೋಟೋವನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ.

ಆದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಚಿತ್ರದಲ್ಲಿರುವ ಗಡ್ಡಧಾರಿ ವ್ಯಕ್ತಿಯ ಹೆಸರು ಪಂಡಿತ್‌ ಇಕ್ಬಾಲ್ ಕಿಶೆನ್‌ ರೆಯು. ಅವರು ಮೊದಲ ಕಾಶ್ಮೀರಿ ಪಂಡಿತ ಕ್ರಿಕೆಟ್‌ ಅಂಪೈರ್‌. ಕಾಶ್ಮೀರ ಸೆಂಟಿನೆಲ್‌ನ 2009ರ ಲೇಖನವೊಂದರ ಪ್ರಕಾರ, ಪಂಡಿತ್‌ ಇಕ್ಬಾಲ್ ಕಿಶೆನ್‌ ರೆಯು ಕಾಶ್ಮೀರಿ ಸಂಪ್ರದಾಯಗಳ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿದ್ದರು.

Comments