ಕಾಂಗ್ರೆಸ್ ವಿರೋಧದ ನಡುವೆಯೂ ಭಾರತಕ್ಕೆ ಬಂದು ಸೇರಿತು #ರಫೆಲ್ ಯುದ್ಧ ವಿಮಾನ ! ಮೊದಲ ಹಾರಾಟದ ದೃಶ್ಯ ನೋಡಿ - ವಿಡಿಯೋ 👇


ವೇಳೆಗಾಗಲೇ ಅದು ಭಾರತದ ಹತ್ತಿರಕ್ಕೂ ಬಂದುಬಿಟ್ಟಿರುತ್ತದೆ. ಚೀನಾ ಮತ್ತು ಭಾರತದ ನಡುವೆ ಯುದ್ಧದ ಕಾಮರ್ೋಡಗಳು ಮುಸುಕಿರುವ ಈ ಹೊತ್ತಿನಲ್ಲೇ ಈ ವಿಮಾನಗಳ ಆಗಮನ ಅದೆಷ್ಟು ಸ್ಫೂತರ್ಿದಾಯಕವಾಗಿದೆ ಎಂಬುದನ್ನು ವಣರ್ಿಸಲು ಸಾಧ್ಯವಿಲ್ಲ. ಇಡಿಯ ಸೇನಾಪಾಳಯ ಹರ್ಷದಿಂದ ಕುಣಿಯುತ್ತಿದೆ. ಚೀನಾದ ವಿರುದ್ಧ ಆಧುನಿಕ ಶಸ್ತ್ರಾಸ್ತ್ರಗಳ ಜಿದ್ದಿನಲ್ಲಿ ರಫೇಲ್ಗಳು ಖಂಡಿತವಾಗಿಯೂ ನಮ್ಮ ಶಕ್ತಿಯನ್ನು ಹೆಚ್ಚಿಸಲಿದೆ. ಗಾಲ್ವಾನ್ ಕಣಿವೆಯಲ್ಲಿ ನಡೆದ ಘಟನೆಯ ನಂತರ ಎರಡೂ ಪಡೆಗಳು ಎಲ್ಎಸಿಯಿಂದ ದೂರ ಸರಿಯಬೇಕು ಎಂದು ಮಾತುಕತೆಯಾಡಲಾಗಿತ್ತು. ಅನೇಕ ರಕ್ಷಣಾ ತಜ್ಞರು ಹೀಗೆ ಸಮಯ ಕೊಡುವುದು ಚೀನಾಕ್ಕೆ ಲಾಭದಾಯಕ ಎಂದು ಲೇಖನಗಳನ್ನು ಬರೆದರು. ಚೀನಾ ಯಾವಾಗಲೂ ಹಾಗೆಯೇ. ನೆಪಗಳನ್ನು ಮುಂದಿಟ್ಟುಕೊಂಡು ಕಾಲ ತಳ್ಳುತ್ತ ತನ್ನ ಬಯಕೆಯನ್ನು ಮಾತ್ರ ಈಡೇರಿಸಿಕೊಳ್ಳುತ್ತಲಿರುತ್ತದೆ. ಈ ಕಾರಣದಿಂದಾಗಿಯೇ ಎಲ್ಎಸಿಯಿಂದ ಹಿಂದೆ ಸರಿಯುವ ಚೀನಾದ ವೇಗ ಕೂಡ ಅತ್ಯಂತ ಕಡಿಮೆಯದ್ದಾಗಿದೆ. 1962ರ ಯುದ್ಧದ ಹೊತ್ತಿನಲ್ಲೂ ಹಿಗೆಯೇ ಆಗಿತ್ತು. ಭಾರತದಿಂದ ಸಾಕಷ್ಟು ಸಮಯವನ್ನು ಪಡೆದುಕೊಂಡ ಚೀನಾ ತನಗೆ ಅನುಕೂಲವಾದ ವಾತಾವರಣವಿದ್ದಾಗ ಆಕ್ರಮಣ ನಡೆಸಿಬಿಟ್ಟಿತ್ತು. ನಾವಿನ್ನೂ ಹಿಂದೂ-ಚೀನೀ ಭಾಯಿ-ಭಾಯಿ ಮಂತ್ರ ಜಪಿಸುತ್ತಾ ಮೈಮರೆತು ಮಲಗಿದ್ದೆವು! ಈ ಬಾರಿ ನಡೆದಿರುವ ಪ್ರಕ್ರಿಯೆ ಬಲು ವಿಭಿನ್ನ. ಚೀನಾದೊಂದಿಗೆ ಮಾತುಕತೆ ನಡೆಸುತ್ತಾ ಭಾರತವೇ ಒಂದಷ್ಟು ಕಾಲ ತಳ್ಳುತ್ತಿದೆಯೇನೋ ಎನಿಸುತ್ತಿದೆ. ಹಾಗೇ ಸುಮ್ಮನೆ ಹಳೆಯದನ್ನು ಮೆಲುಕು ಹಾಕಿ. ಗಾಲ್ವಾನ್ ಕಣಿವೆಯಲ್ಲಿ 20 ಸೈನಿಕರು ಹುತಾತ್ಮರಾದ ನಂತರ ಪ್ರಧಾನಿ ಮೋದಿ ತೀರಿಕೊಂಡವರ ಬಲಿದಾನ ವ್ಯರ್ಥವಾಗದು ಎಂದು ಆಕ್ರೋಶಭರಿತವಾಗಿ ನುಡಿಯುವಾಗಲೇ ಚೀನಾದೊಂದಿಗೆ ಮಾತುಕತೆಯನ್ನೂ ನಡೆಸುತ್ತಿದ್ದರು. ಅದೇ ವೇಳೆಗೆ ಫ್ರಾನ್ಸಿನೊಂದಿಗೆ ಚಚರ್ೆ ನಡೆಸಿ ಸಪ್ಟೆಂಬರ್ಗೆ ಬರಬೇಕಾಗಿದ್ದ ರಫೇಲ್ ಜುಲೈ ಕೊನೆಯ ವೇಳೆಗೆ ಪೂರೈಕೆಯಾಗುವಂತೆ ಒತ್ತಡ ಹೇರಿದರು. ಲಾಕ್ಡೌನಿನ ನಡುವೆಯೂ ಭಾರತದ ಬೇಡಿಕೆಯನ್ನು ಮನ್ನಿಸಿದ ಫ್ರಾನ್ಸ್ ನಿನ್ನೆ ಯುದ್ಧವಿಮಾನವನ್ನು ರವಾನಿಸಿದೆ. 7000 ಕಿ.ಮೀ ದೂರವನ್ನು ಕ್ರಮಿಸಿ ಅಂಬಾಲಾಕ್ಕೆ ಬಂದಿಳಿಯಲಿರುವ ಈ ವಿಮಾನಗಳನ್ನು ಹಾರಾಡಿಸುವ ತರಬೇತಿ ಕೂಡ ಫ್ರಾನ್ಸ್ನಲ್ಲಿ ಈಗ ನಡೆಯುತ್ತಿದೆ. ಈ ನಡುವೆ ರಕ್ಷಣಾ ಸಚಿವ ರಾಜ್ನಾಥ್ ಸಿಂಗರು ರಷ್ಯಾಕ್ಕೆ ಹೋಗಿದ್ದು ಮಿಸೈಲ್ ಆಕ್ರಮಣದಿಂದ ರಕ್ಷಣೆ ಪಡೆಯುವ ಎಸ್-400 ಸಿಸ್ಟಮ್ಗಳನ್ನು ಬೇಗ ನೀಡುವಂತೆ ಕೇಳಿಕೊಂಡು ಬಂದಿದ್ದಾರೆ. ರಷ್ಯಾ ಒಪ್ಪಿಗೆಯನ್ನೂ ಸೂಚಿಸಿದೆ. ಸೂಕ್ಷ್ಮವಾಗಿ ಗಮನಿಸಬಹುದಾದ ಮತ್ತೊಂದು ಸಂಗತಿ ಎಂದರೆ ಕೋವಿಡ್ ಕಿಟ್ಗಳನ್ನು ತಯಾರಿಸುವ ನೆಪದಲ್ಲಿ ಇಸ್ರೇಲಿನ ಒಂದಷ್ಟು ವಿಜ್ಞಾನಿಗಳು ಅದಾಗಲೇ ಭಾರತಕ್ಕೆ ಬಂದಿಳಿದಿದ್ದಾರೆ. ಮೇಲ್ನೋಟಕ್ಕೆ ಕೋವಿಡ್ ಕಾರಣ ಎನಿಸಿದರೂ ಒಳಗೆ ಬೇರೆಯದ್ದೇ ವಿಚಾರ ಇದ್ದಿರಬಹುದು. ಭಾರತ ಯಾವಾಗ ಯಾರೊಂದಿಗೆ ಯುದ್ಧಕ್ಕೆ ನಿಂತಾಗಲೂ ಇಸ್ರೇಲ್ ನಮಗೆ ಹೆಗಲಾಗಿ ನಿಂತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬೇಕಷ್ಟೆ!

Comments