ಸ್ಪೋಟಕ ಬ್ರೇಕಿಂಗ್: ಬಿಜೆಪಿಗೆ ಸಿಕ್ತು ಮತ್ತೊಂದು ಭರ್ಜರಿ ಗುಡ್ ನ್ಯೂಸ್.!

ಮಧ್ಯಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡ ನಂತರ ಕಾಂಗ್ರೆಸ್ ಗೆ ಒಂದಾದ ಮೇಲೆ ಒಂದು ಆಘಾತ ಎದುರಾಗುತ್ತಲೇ ಇದೆ.  ಕಾಂಗ್ರೆಸ್ ಶಾಸಕ ನಾರಾಯಣ ಸಿಂಗ್ ಪಟೇಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ  ಬಿಜೆಪಿ ಸೇರ್ಪಡೆಯಾಗಿದ್ದಾರೆ. 

ಈ ಮೂಲಕ  230 ಜನರ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲ  89ಕ್ಕೆ ಇಳಿದಿದೆ.  ಮಧ್ಯಪ್ರದೇಶದ 27  ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಾಗಿದೆ.

ಐದು ದಿನಗಳ ಹಿಂದೆ ಪ್ರದ್ಯಮ್ನ ಸಿಂಗ್ ಲೋಧಿ ಕಾಂಗ್ರೆಸ್ ತೊರೆದಿದ್ದರು.  ಮೊದಲ ಸಾರಿ ಎಂಎಲ್ ಎ ಆಗಿದ್ದ ಪಟೇಲ್ ರಾಜೀನಾಮೆ ನೀಡಿದ್ದೇನೆ ಎಂದು ಪಟೇಲ್ ತಿಳಿಸಿದ್ದಾರೆ. ಜ್ಯೋತಿರಾಧಿತ್ಯ ಸಿಂಧಿಯಾ ಜತೆ ಕಾಂಗ್ರೆಸ್ ಶಾಸಕರು ತಂಡೊಪ ತಂಡವಾಗಿ ರಾಜೀನಾಮೆ ನೀಡಿದ್ದರು. ಆ ಪರ್ವ ಮುಂದುವರಿದೆ ಇದೆ.

Comments