ಇವರನ್ನು MP ಮಾಡಿದಕ್ಕೂ ಸಾರ್ಥಕ ಆಯ್ತು !! ಕೊರೊನ ನಿಯಂತ್ರಣಕ್ಕೆ ಹೊಸ ಪ್ಲಾನ್ ಸೃಷ್ಟಿಸಿದ ಸೂರ್ಯ !!


ಇವರನ್ನು MP ಮಾಡಿದಕ್ಕೂ ಸಾರ್ಥಕ ಆಯ್ತು !! ಕೊರೊನ ನಿಯಂತ್ರಣಕ್ಕೆ ಹೊಸ ಪ್ಲಾನ್ ಸೃಷ್ಟಿಸಿದ ಸೂರ್ಯ !! ಹಿಂದಿ ಬ್ಯಾನರ್‌ ತೆರವುಗೊಳಿಸಿದ ಪ್ರಕರಣದಲ್ಲಿ ಕನ್ನಡಿಗರನ್ನು ರೌಡಿಗಳೆಂದು ಕರೆದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜೈನ ದೇವಸ್ಥಾನವೊಂದರಲ್ಲಿ ಹಾಕಿದ್ದ ಹಿಂದಿ ಬ್ಯಾನರ್ ತೆರವುಗೊಳಿಸಿದ್ದಕ್ಕೆ ತೇಜಸ್ವಿ ಸೂರ್ಯ ಆಕ್ಷೇಪ ವ್ಯಕ್ತಪಡಿಸಿದ್ದರು. ಜತೆಗೆ ಈ ಬ್ಯಾನರ್ ತೆರವುಗೊಳಿಸಿದವರು ಕೆಲವರು ರೌಡಿಗಳು ಎಂದೂ ಆರೋಪಿಸಿದ್ದರು. ಬೆಂಗಳೂರಿನಲ್ಲಿ ಉರ್ದು ಭಾಷೆಯಲ್ಲಿ ಬಳಕೆ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ. ಹಿಂದಿ ಮೇಲೆ ಮಾತ್ರ ದಾಳಿ ನಡೆಸುತ್ತಿದ್ದಾರೆ ಎಂಬ ಅರ್ಥದಲ್ಲಿ ಅವರು ಟ್ವೀಟ್ ಮಾಡಿದ್ದರು.

ರಾಜ್ಯದಲ್ಲಿ ಇರುವ ಅಕ್ರಮ ವಲಸಿಗರ ಹಾವಳಿ ವಿರುದ್ಧ ಕಳೆದ ತಿಂಗಳು ಸ್ವತಃ ತೇಜಸ್ವಿ ಸೂರ್ಯ ಮಾತನಾಡಿದ್ದರು. ಆದರೆ, ಕನ್ನಡ ಆಡಳಿತ ಭಾಷೆಯಾಗಿರುವ ರಾಜ್ಯದಲ್ಲಿ ಕನ್ನಡದಲ್ಲಿ ವ್ಯವಹರಿಸಲು ಒಪ್ಪದ, ಕನ್ನಡ ಫಲಕಗಳನ್ನು ಹಾಕದ ಪರಭಾಷಿಕರ ವಿರುದ್ಧ ತಮ್ಮದೇ ರಾಜ್ಯದ ಭಾಷಾಭಿಮಾನಿಗಳ ವಿರುದ್ಧ ಅವರು ವಾಗ್ದಾಳಿ ನಡೆಸಿರುವುದು ಅನೇಕರಲ್ಲಿ ಕಿಡಿ ಹಚ್ಚಿಸಿದೆ.



ಕನ್ನಡ ಪ್ರೇಮಿಗಳಿಗೆ ಅಪಚಾರ- ತೇಜಸ್ವಿ ಬೆಂಗಳೂರಿನ ಕೆಲವು ರೌಡಿಗಳು ದೇವಸ್ಥಾನವೊಂದರಲ್ಲಿ ಹಿಂದಿ ಬ್ಯಾನರ್ ವಿಚಾರದಲ್ಲಿ ನಮ್ಮ ಜೈನ ಸಹೋದರರ ಮೇಲೆ ದಾಳಿ ನಡೆಸಿರುವುದು ತೀವ್ರ ನೋವುಂಟುಮಾಡಿದೆ. ಆದರೆ, ಅವರು ಬೆಂಗಳೂರಿನಲ್ಲಿ ಉರ್ದು ಬಳಕೆಯನ್ನು ಪ್ರಶ್ನಿಸುವುದಿಲ್ಲ. ಕರ್ನಾಟಕಕ್ಕೆ ಕಾಣಿಕೆ ಸಲ್ಲಿಸಿರುವ ಶಾಂತಿಪ್ರಿಯ ಜೈನರ ಮೇಲೆ ಹಲ್ಲೆ ನಡೆಸಿರುವುದು ಕನ್ನಡದ ನೈಜ ಪ್ರೇಮಿಗಳು ಮತ್ತು ಕಾರ್ಯಕರ್ತರಿಗೆ ಅಪಚಾರ ಮಾಡಿದಂತೆ ಎಂದು ತೇಜಸ್ವಿ ಹೇಳಿದ್ದಾರೆ.

ಅವರು ಮಾಡುತ್ತಿರುವುದು ವ್ಯಾಪಾರ, ಸಂಸ್ಕೃತಿಯನ್ನಲ್ಲ ಮೊದಲು ಕರ್ನಾಟಕದಲ್ಲಿರುವ ಪರಭಾಷಿಕರಿಗೆ ಕನ್ನಡದಲ್ಲಿ ವ್ಯವಹರಿಸಲು ಹೇಳಿ. ಅವರು ಹರಿದಿರುವುದು ಹಿಂದಿಯಲ್ಲಿ ಹಾಕಿರುವ ಬ್ಯಾನರ್‌ಅನ್ನು ಮಾತ್ರ. ಜೈನರ ದೇವಾಲಯಕ್ಕೆ ಅಥವಾ ಅವರ ಧಾರ್ಮಿಕ ನಂಬಿಕೆಗೆ ಹಾನಿ ಮಾಡಿಲ್ಲ. ಕರ್ನಾಟಕದಲ್ಲಿ ಇರುವ ಅವರಿಗೆ ಕನ್ನಡದಲ್ಲಿ ಬ್ಯಾನರ್ ಹಾಕಲು ಏನು ಕಷ್ಟ. ಕನ್ನಡಿಗರು ತಮ್ಮ ನೆಲದಲ್ಲಿ ಬೇರೆ ಭಾಷಿಕರ ಭಾಷಾ ದೌರ್ಜನ್ಯವನ್ನು ಏಕೆ ಸಹಿಸಿಕೊಳ್ಳಬೇಕು. ಇಲ್ಲಿ ಹಿಂದಿ ಫಲಕಗಳನ್ನು ಬಳಸುತ್ತಿರುವವರು ಪಂಪ, ರನ್ನ ಅಥವಾ ಪೊನ್ನರಂತೆ ಕನ್ನಡಿಗರಾಗಿ ಕನ್ನಡಕ್ಕೆ ಕೊಡುಗೆ ನೀಡಿದವರಲ್ಲ. ತಮ್ಮ ವ್ಯಾಪಾರಕ್ಕಾಗಿ ಬೇರೆ ರಾಜ್ಯದಿಂದ ಇಲ್ಲಿಗೆ ವಲಸೆ ಬಂದು ವ್ಯವಹಾರ ನಡೆಸುತ್ತಿರುವವರು. ಅವರು ಇಲ್ಲಿ ನಡೆಸುತ್ತಿರುವುದು ವ್ಯಾಪಾರವನ್ನೇ ಹೊರತು ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಕೊಡುಗೆ ನೀಡುವ ಕೆಲಸವನ್ನಲ್ಲ ಎಂದು ತೇಜಸ್ವಿ ಸೂರ್ಯ ಹಾಗೂ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವವರ ವಿರುದ್ಧ ಟ್ವೀಟ್ ಮಾಡಲಾಗಿದೆ.






Comments