ಮಲೇರಿಯಾಗೆ ಸೇರಿದಂತೆ ಇತರೇ ರೋಗಗಳಿಗೆ ನೀಡಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ನೀಡದಿದ್ದರೆ ಪ್ರತೀಕಾರದ ಮಾತುಗಳನ್ನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಪ್ರಧಾನಿ ಮೋದಿ ಅವರ ಬಗ್ಗೆ ಹಾಡಿ ಹೊಗಳಿದ್ದಾರೆ. ಭಾರತದಿಂದ ಅಮೆರಿಕಗೆ ಔಷಧಿ ರಫ್ತಾಗಲಿದೆ ಎಂದು ಗೊತ್ತಾಗುತ್ತಿದ್ದಂತೆ ತಮ್ಮ ಮಾತು ಹಿಂಪಡೆದಿರುವ ಟ್ರಂಪ್, ಪ್ರಧಾನಿ ಮೋದಿ ಈಸ್ ಗ್ರೇಟ್ ಎಂದು ಬಣ್ಣಿಸಿದ್ದಾರೆ.
ಮನೆಯಿಂದಲೇ ಅನ್ ಲೈನ್ ನಲ್ಲಿ ಕೆಲಸದ ಮೂಲಕ ಹಣಗಳಿಸಲು ಇಲ್ಲಿ ಕ್ಲಿಕ್ ಮಾಡಿ
![]() |
| Click Here👆👆 |
ಕೊರೊನಾ ವೈರಸ್‌ನಿಂದ ಹೆಚ್ಚು ಪೆಟ್ಟು ತಿಂದಿರುವ ಅಗತ್ಯ ದೇಶಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯೂ ಸೇರಿದಂತೆ ಒಟ್ಟು 24 ವಿವಿಧ ಮಾತ್ರೆಗಳನ್ನು ರಫ್ತು ಮಾಡಲಲು ಭಾರತ ನಿರ್ಧರಿಸಿದ ಬೆನ್ನಲ್ಲೇ, ಡೊನಾಲ್ಡ್ ಟ್ರಂಪ್ ಉಲ್ಟಾ ಹೊಡೆದಿದ್ದಾರೆ. ಭಾರತದ ಪ್ರಧಾನಿ ಮೋದಿ ಓರ್ವ ಶ್ರೇಷ್ಠ ನಾಯಕ ಎಂದು ಬಣ್ಣಿಸಿರುವ ಅವರು, ಮೋದಿ ಓರ್ವ ಉತ್ತಮ ಮತ್ತು ಆತ್ಮೀಯ ಗೆಳೆಯ ಎಂದು ಶ್ಲಾಘಿಸಿದ್ದಾರೆ.


Comments
Post a Comment