ಚೀನಾದಲ್ಲಿರುವ ಕರ್ನಾಟಕದ ಮುಸ್ಲಿಂ ಯುವಕ ಕ್ಯಾಕರಿಸಿ ಉಗಿದಿದ್ದು ಯಾರಿಗೆ ಗೊತ್ತೆ? ಸೂಪರ್!! ವಿಡಿಯೋ ನೋಡಿ, ದೇಶ ದ್ರೋಹಿಗಳಿಗೆ ತಲುಪುವರೆಗೆ ಶೇರ್ ಮಾಡಿ !!


ಕೊರೋನ ವಿದೇಶದಲ್ಲಿ ವೇಗವಾಗಿ ಹರಡುತ್ತಿದ್ದಂತೆ ವಿದೇಶದಿಂದ ಭಾರತೀಯರು ತಾಯ್ನಾಡಿಗೆ ಓಡೋಡಿ ಬಂದಿದ್ದಾರೆ. ಆದರೆ ಚೀನದಲ್ಲೇ ಹುಟ್ಟಿದ ವೈರಸ್ ಆದರೂ ಚೀನಾದಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದ ಕರ್ನಾಟಕದ ಸಾಹೀಲ್ ಎಂಬ ಯುವಕ ಸುಮಾರು ಎರಡು ವಾರದಿಂದ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ವಿಶ್ಲೇಷಣೆ ನೀಡುತ್ತಾ ಭಾರತೀಯರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಈ ಕುರಿತು ಮತ್ತೊಂದು ವೀಡಿಯೋ ಮಾಡಿರುವ ಅವರು, ನಾನು ನನ್ನೆಲ್ಲಾ ಗೆಳೆಯರಿಗೆ ಹೋಗಬೇಡಿ ಇಲ್ಲಿಂದ, ಭಾರತಕ್ಕೆ ಮರಳಿ ಅಲ್ಲಿನ ಜನಗಳಿಗೂ ಹರಡಬೇಡಿ ಎಂದು ಕೇಳಿಕೊಂಡೆ ಆದರೆ ಯಾರೂ ನನ್ನ ಮಾತು ಕೇಳಲಲ್ಲಿ. ಭಾರತ ಈಗ ತುಂಬಾ ಅಪಾಯದ ಮಟ್ಟದಲ್ಲಿದೆ, ಭಾರತ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಹಗಲು ರಾತ್ರಿ ಶ್ರಮಿಸುತ್ತಿದೆ, ಆದರೆ ನಮ್ಮ ಜನಗಳು ಯಾಕೆ ಈ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವೈದ್ಯರ ಮೇಲೆ ನಡೆದ ಭಲ್ಲೆಯನ್ನು ಉಲ್ಲೇಖಿಸಿದ ಸಾಹೀಲ್, ಭಾರತದಲ್ಲಿ ತುಂಬಾ ಒಳ್ಳೆಯ ಡಾಕ್ಟರ್ ಗಳಿದ್ದಾರೆ, ಹಗಲು ರಾತ್ರಿಯೆನ್ನದೆ ದೇಶಕ್ಕಾಗಿ ಕುಟುಂಬವನ್ನು ಬಿಟ್ಟು ನಿಮಗಾಗಿ ಕೆಲಸ ಮಾಡುತ್ತಿದ್ದಾರೆ, ಆದರೆ ನೀವು ಅವರ ಮೇಲೆ ಹಲ್ಲೆ ಮಾಡುತ್ತೀರಲ್ಲಾ? ನಿಮಗೆಲ್ಲಾ ಏನು ಹೇಳಬೇಕೋ ತಿಳಿಯುತ್ತಿಲ್ಲ! ಅವರನ್ನು ದೇವರಂತೆ ನೋಡಬೇಕು, ಅವರಿಗೆ ಅವರ ಕೆಲಸ ಮಾಡಲು ಬಿಡಿ ಎಂದಿದ್ದಾರೆ.

ಭಾರತದ ಪರಿಸ್ಥಿತಿಗಳ ಬಗ್ಗೆ ಮಾತನಾಡಿದ ಸಾಹೀಲ್, ನೀವು ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿದ್ದೀರ, ಆದರೆ ಇದು ನಿಮಗೆ ಅರ್ಥವಾಗುತ್ತಿಲ್ಲ, ನಾನು ಕರ್ನಾಟಕದ ಅನೇಕ ಯುವಕರನ್ನು ಲಾಕ್ ಡೌನ್ ಹೇಗಿದೆ ಎಂದು ಕೇಳಿದರೆ ಅವರೆಲ್ಲಾ ತಮಾಷೆಯಾಗಿ ರಜೆಯನ್ನು ಒಳ್ಳೆ ಎಂಜಾಯ್ ಮಾಡುತ್ತಿದ್ದೀವಿ ಎನ್ನುತ್ತಾರೆ, ನಿಮಗಿನ್ನೂ ವೈರಸ್ ಬಂದವರ ಸ್ಥಿತಿ ತಿಳಿದಿಲ್ಲಾ, ವೈರಸ್ ಬಂದು ಏನಾದರೂ ಸಾವನ್ನಪ್ಪಿದರೆ ನಿಮ್ಮ ತಂದೆ ತಾಯಿಗೂ ನಿಮ್ಮ ಮುಖ ತೋರಿಸುವುದಿಲ್ಲ, ಆ ಸಾವಿನ ಭೀಕರತೆಯನ್ನು ನೀವೊಮ್ಮೆ ವೀಡಿಯೋಗಳಲ್ಲಿ ನೋಡಿ, ಆ ರೋಗಿಯ ಜಾಗದಲ್ಲಿ ನಿಮ್ಮ ತಂದೆ ತಾಯಿಗಳನ್ನು ಊಹಿಸಿಕೊಂಡು ಒಮ್ಮೆ ಪರಿಸ್ಥಿತಿಯ ಅವಲೋಕನ ಮಾಡಿ ಎಂದಿದ್ದಾರೆ.

ಕೊನೆಯದಾಗಿ ಎಲ್ಲಾ ತನ್ನ ಸಮುದಾಯದವರಿಗೆ ಹಾಗೂ ಭಾರತೀಯರಿಗೆ ಕರೆ ಕೊಟ್ಟಿರುವ ಸಾಹೀಲ್ ಇದರಲ್ಲೂ ಧರ್ಮವನ್ನು ತಂದು ಮತ್ತೆ ಹಿಂಸಾಚಾರ ಮಾಡಬೇಡಿ, ಮೊದಲು ನಿಮ್ಮನ್ನು ಪರೀಕ್ಷೆ ಮಾಡಲು ಬಂದ ಡಾಕ್ಟರ್ ಗಳೊಂದಿಗೆ ಸಭ್ಯವಾಗಿ ವರ್ತಿಸಿ, ಅವರಿಗೂ ಒಂದು ಕುಟುಂಬ ಇದೆ ಎನ್ನುವುದನ್ನು ತಲೆಯಲ್ಲಿಟ್ಟುಕೊಳ್ಳಿ ಎಂದು ಹೇಳಿದ್ದಾರೆ.

Comments