Breaking news !! ರಾಜ್ಯದ ಭದ್ರತೆಗೆ ಮತ್ತೊಬ್ಬ ಶಾಸಕನಿಗೆ ಡಿಸಿಎಂ ಹುದ್ದೆ ನೀಡಿದ ಯಡಿಯೂರಪ್ಪ, ಬಂಪರ್ ಆಫರ್ ಪಡೆದ ಡಾ. ಸುಧಾಕರ್
ಕೊರೊನಾ ವೈರಸ್ ವಿಚಾರವಾಗಿ ರಾಜ್ಯ ಸರ್ಕಾರದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರಿಗಿಂತಲೂ ಹೆಚ್ಚಾಗಿ, ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಹೆಚ್ಚಿನ ಜವಾಬ್ದಾರಿ ನಿಭಾಯಿಸುತ್ತಿರುವುದನ್ನು ನಾವು ಕಂಡಿದ್ದೇವೆ. ಸದನದಲ್ಲಿಯೂ ಆರೋಗ್ಯ ಸಚಿವ ರಾಮುಲು ಉತ್ತರಿಸಬೇಕಿದ್ದ ಪ್ರಶ್ನೆಗಳಿಗೆ ಸುಧಾಕರ್ ಅವರೇ ಉತ್ತರಿಸುತ್ತಿದ್ದರು. ಸದ್ಯದ ಮಾಹಿತಿಯಂತೆ ಕೊರೊನಾ ವೈರಸ್ ಪ್ರಕರಣದ ಜವಾಬ್ದಾರಿಯನ್ನು ಸುಧಾಕರ್ ಹೆಗಲಿಗೆ ಸಿಎಂ ಬಿಎಸ್ ವೈ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಈ ಮೂಲಕ ಕೊರೊನಾ ವೈರಸ್ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಶ್ರೀರಾಮಲು ಔಟ್ ಆಗಿದ್ದು, ವೈದ್ಯಕೀಯ ಸಚಿವ ಕೆ.ಡಾ.ಸುಧಾಕರ್ ಇನ್ ಆಗಿದ್ದಾರೆ. ವರದಿಗಳ ಪ್ರಕಾರ ಕೊರೊನಾ ನಿರ್ವಹಣೆ ವಿಚಾರವಾಗಿ ಶ್ರೀರಾಮಲು ವಿಫಲವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಯಡಿಯೂರಪ್ಪ, ಶ್ರೀರಾಮುಲು ಅವರಿಗೆ ಬೇರೆ ಕೆಲಸ ವಹಿಸಲಾಗಿದೆ. ಅವರು ರಾಜ್ಯ ಸುತ್ತಾಡಿ, ಪರಿಸ್ಥಿತಿಗಳನ್ನು ಸುಧಾರಿಸಬೇಕಿದೆ ಎಂದು ಹೇಳಿದ್ದಾರೆ
ಮತ್ತೆ ಸುಧಾಕರ್ ಅವರನ್ನು ಡಿಸಿಎಂ ಮಾಡಲು ಮುಂದಾಗಿದ್ದಾರೆ, ಹಾಗಾಗಿ ಸುಧಾಕರ್ ಅವರಿಗೆ ಸದ್ಯದಲ್ಲೇ ಡಿಸಿಎಂ ಹುದ್ದೆ ಲಭಿಸಬಹುದು

Comments
Post a Comment