ಸಿದ್ದರಾಮಯ್ಯ ಅವರನ್ನು ಹಾಡಿ ಕೊಂಡಾಡಿದ ಬಿಜೆಪಿ ಶಾಸಕ, ಸಿದ್ದರಾಮಯ್ಯ ಅವರ ಸ್ಥಾನವನ್ನು ತುಂಬಲು ಯಡಿಯೂರಪ್ಪ ಅವರಿಂದಲೂ ಅಸಾಧ್ಯ ಎಂದ, ಯಡಿಯೂರಪ್ಪ ಆಪ್ತ ?
ಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದರೂ ಸಿದ್ದರಾಮಯ್ಯ ಅವರು ಜೆಡಿಎಸ್ ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿಲ್ಲವೆ ಎಂದು ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಪ್ರಶ್ನಿಸಿದ್ದಾರೆ.
ಈಚೆಗೆ ಮುಂಡಗೋಡಿನಲ್ಲಿ ನಡೆದ ಸಭೆಯಲ್ಲಿ ಹೆಬ್ಬಾರ್ ಕಾಂಗ್ರೆಸ್‌ಗೆ ಮೋಸ ಮಾಡಿ ಹೋಗಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಹೆಬ್ಬಾರ್ ಈ ರೀತಿಯಾಗಿ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಒಳ್ಳೆಯ ನಾಯಕತ್ವ ಗುಣವುಳ್ಳವರು. ಆದರೆ, ಅವರ ಘನತೆಗೆ ಅಗೌರವ ತರುವಂಥ ಹೇಳಿಕೆಗಳನ್ನು ನೀಡಬಾರದು ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಜನಗಳ ಮನ ಮೆಚ್ಚಿದ ನಾಯಕನಾಗಿ ಇದ್ದುದ್ದನ್ನು ನಾನು ಕಂಡಿದ್ದೇನೆ ಜನ ಮೆಚ್ಚಿದ ನಾಯಕ ನಮ್ಮ ಸಿದ್ದರಾಮಯ್ಯ ಎಂದರು

Comments
Post a Comment