ಇದೀಗ ಬಂದ ಸುದ್ದಿ !! ಸಿದ್ದರಾಮಯ್ಯ ಅವರ ಮುಂದೆಯೇ ಬಿಜೆಪಿ ಸೇರುತ್ತೇನೆ ಎಂದ ಮಾಜಿ ಶಾಸಕ !! ಪಕ್ಷ ಬಿಡಬೇಡ ಎಂದು ಗೋಗರೆದ ಸಿದ್ದು



ಶುಕ್ರವಾರ !! ರಾಜಕೀಯವಾಗಿ ಅಧಿಕಾರ ಹಾಗೂ ಗೌರವ ಕೊಟ್ಟ ಬಿಜೆಪಿ ಸೇರಬೇಕು… ನೀವು ಯಾವ ಪಕ್ಷದಲ್ಲಿದ್ದರೂ ನಾವು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ..ಮರಳಿ ಮನೆಗೆ ಎಂಬಂತೆ ನೀವು ಬಿಜೆಪಿಯಲ್ಲಿದ್ದರೇನೇ ಚೆನ್ನ..
ಎರಡು ವರ್ಷಗಳ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ಸಿ.ಎಚ್.ವಿಜಯಶಂಕರ್ ತಮ್ಮ ಸ್ವಗೃಹದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾನ ಮನಸ್ಕರ ಸಭೆಯಲ್ಲಿ ಅಭಿಮಾನಿಗಳು ಬಿಜೆಪಿಗೆ ಮರಳುವಂತೆ ಒತ್ತಡ ಹೇರಿದ ಪರಿ ಇದು.
ಮುಖಂಡರಾದ ಎ.ಪಿ.ಸ್ವಾಮಿ ಮಾತನಾಡಿ, ಬಿಜೆಪಿಗಾಗಿ ನೀವು ದುಡಿದಿದ್ದೀರಿ. ನಿಮಗೂ ಬಿಜೆಪಿ ಉತ್ತಮ ಗೌರವವನ್ನೇ ನೀಡಿದೆ. ಇದೀಗ ಮತ್ತೆ ನೀವು ಬಿಜೆಪಿಗೆ ಹೋದರೆ ನಿಮ್ಮ ಹಿಂದೆ ನಾವೂ ಬರುತ್ತೇವೆ. ಆದರೆ ಈ ಹಿಂದೆ ಮಾಡಿದಂತೆ ಕಾರ್ಯಕರ್ತರು, ಅಭಿ ಮಾನಿಗಳನ್ನು ಮರೆಯಬೇಡಿ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಕರೆದುಕೊಂಡು ಹೋಗಿ ಎಂದು ತಿಳಿಹೇಳಿದರು.
ಮರಳಿ ಮನೆಗೆ ಹೋಗಲು ನಿರ್ಧರಿಸಿದ್ದರೆ ಅಲ್ಲಿ ನಿಮಗೆ ಸೂಕ್ತ ಸ್ಥಾನಮಾನ ಸಿಗಬಹುದೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನಿಮ್ಮೊಂದಿಗೆ ನಾವು ಬರುತ್ತೇವೆ ಎಂದು ಶೀರೇನಹಳ್ಳಿ ಬಸವರಾಜು ಹೇಳಿದರು. ಬಿಜೆಪಿ ತೊರೆದಿದ್ದು ತಪ್ಪಾಗಿದೆ. ಮುಂದೆ ಇಂತಹ ತಪ್ಪು ಆಗದಂತೆ ಎಚ್ಚರವಹಿಸಿ. ತಾಲೂಕಿನಲ್ಲಿ ನಿಮಗೆ ನಿಮ್ಮದೇ ಅಭಿಮಾನಿಗಳಿ ದ್ದಾರೆ. ನಿಮ್ಮ ಸರಳತೆ ಹಾಗೂ ಎಲ್ಲರನ್ನೂ ಒಂದಾಗಿ ಕರೆದುಕೊಂಡು ಹೋಗುವ ಗುಣವೇ ನಿಮ್ಮನ್ನು ಕಾಪಾಡಲಿದೆ ಎಂದು ಕುರುಬರ ಸಂಘದ ತಾಲೂಕು ಅಧ್ಯಕ್ಷ ಡಿ.ಕೆ.ಕುನ್ನೇಗೌಡ ಸಲಹೆ ನೀಡಿದರು. ಇದಕ್ಕೆ ದನಿಗೂಡಿಸಿದ ವೀರತಪ್ಪ, ಅಭಿಮಾನಿಗಳು ಮತ್ತು ಕಾರ್ಯಕರ್ತರ ಮಾತು ಕೇಳಿ. ಹಿತ್ತಾಳೆ ಕಿವಿ ಆಗಬೇಡಿ ಎಂದರು.
ಕಾಂಗ್ರೆಸ್ ಕಚೇರಿ ನೋಡಿಲ್ಲ: 2009, 14 ಮತ್ತು 19ರ ಲೋಕಸಭಾ ಚುನಾವಣೆಯಲ್ಲಿನ ಸತತ ಸೋಲು ನನ್ನನ್ನು ಘಾಸಿಗೊಳಿಸಿತು. 2ವರ್ಷಗಳ ಹಿಂದೆ ಸಿದ್ದರಾಮಯ್ಯನವರ ಆಶ್ವಾಸನೆ ನಂಬಿ ಕಾಂಗ್ರೆಸ್ ಸೇರಿದೆ. ಪಕ್ಷ ಸೇರ್ಪಡೆಗೆ ಕೆಪಿಸಿಸಿ ಕಚೇರಿಗೆ ಹೋಗಿದ್ದನ್ನು ಬಿಟ್ಟರೆ, ಇಂದಿನವರೆಗೂ ಆ ಕಚೇರಿಗೆ ಕಾಲಿಟ್ಟಿಲ್ಲ ಎಂದು ಸಿ.ಎಚ್.ವಿಜಯಶಂಕರ್ ಹೇಳಿದರು.
ನಾನು ಕಾಂಗ್ರಸ್ ಪಕ್ಷವನ್ನು ದೂಷಿಸುತ್ತಿಲ್ಲ. ಅಲ್ಲಿನ ಸಂಪ್ರದಾಯವೇ ಹಾಗೆ. ಸಿದ್ದರಾಮಯ್ಯ ಟಿಕೆಟ್ ಕೊಡಿಸಿದರಾದರೂ ಮೈತ್ರಿ ನಿಯಮ ಪಾಲನೆಯಾಗಲಿಲ್ಲ ಎಂದು ಬೇಸರಿಸಿದರು.
ಮೂಲ ವಲಸೆ ಆಶ್ಚರ್ಯ ತಂದಿತು: ಕಾಂಗ್ರೆಸ್‌ನಲ್ಲಿ ಮೂಲ ಹಾಗೂ ವಲಸೆ ವಾಗ್ವಾದ ಜೋರಾಗಿದೆ. 5 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡಸಿದ ಸಿದ್ದರಾಮಯ್ಯನವರನ್ನೇ ಮೂಲ ವಲಸಿಗ ಎಂಬ ವಿವಾದಕ್ಕೆ ಸಿಲುಕಿಸಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಮ್ಮಂತವರ ಗತಿಯೇನು? ಇಂತಹ ಪದ್ಧತಿ ಬಿಜೆಪಿಯಲ್ಲಿ ನಾನು ಕಂಡಿಲ್ಲ. ನನಗೆ ಟಿಕೇಟ್ ನೀಡಿದ ಸಿದ್ದರಾಮಯ್ಯನವರಿಗೆ ಭಾರವಾಗಿ ಇರಲು ಇಷ್ಟವಿಲ್ಲ. ಹಾಗೆಂದು ಕಾಂಗ್ರೆಸ್‌ನಲ್ಲಿ ಅಧಿಕಾರ ಕೇಳಲು ಆಸ್ಪದವೇ ಇಲ್ಲ. ಕಾರಣ ನನಗಿಂತ ಹಿರಿಯರು ಅಲ್ಲಿದ್ದಾರೆ ಎಂದರು.
ಬಿಜೆಪಿಯಿಂದಲೂ ಆಹ್ವಾನ ಬಂದಿದೆ: ಬಿಜೆಪಿಗೆ ಮರಳುವಂತೆ ವರಿಷ್ಠರಿಂದ ಆಹ್ವಾನ ಬಂದಿದೆ. ರಾಜಕೀಯದಲ್ಲಿ ಇಂತಹ ರಾಜಕೀಯ ಸ್ಥಿತ್ಯಂತರ ಸಹಜ. ಪಕ್ಷಕ್ಕಾಗಿ ದುಡಿದಿದ್ದೀರಿ. ಮರಳಿ ಬರುವುದಾದರೆ ಸ್ವಾಗತ ಎಂದಿದ್ದಾರೆ. ಅಭಿಮಾನಿಗಳು ಬಿಜೆಪಿ ಸೇರುವುದೇ ಒಳಿತು ಎನ್ನುವ ಮಾತುಗಳನ್ನಾಡಿದ್ದಾರೆ. ಹಾಗಾಗಿ ಬಿಜೆಪಿ ವರಿಷ್ಠರ ಜೊತೆ ಅವರ ನೀಡಿರುವ ಆಹ್ವಾನದ ಕುರಿತು ಶೀಘ್ರ ಚರ್ಚಿಸಿ ಸೂಕ್ತ ನಿರ್ಣಯ ಪ್ರಕಟಿಸಲಿದ್ದೇನೆ ಎಂದರು. ಸಭೆಯಲ್ಲಿ ಮುಖಂಡರಾದ ಗಣೇಶ್ ಕುಮಾರಸ್ವಾಮಿ, ನಗರಸಭಾ ಸದಸ್ಯ ಸತೀಶ್ ಕುಮಾರ್, ವಕೀಲ ಸ್ವಾಮಿಗೌಡ, ವೀರತಪ್ಪ, ರಮೇಶ್, ಶಂಕರ್, ರಾಮಸ್ವಾಮಿ, ಪ್ರಕಾಶ್, ಗೋವಿಂದಾಚಾರಿ ಮಾತನಾಡಿದರು. 100ಕ್ಕೂ ಹೆಚ್ಚು ಅಭಿಮಾನಿಗಳು ಭಾಗವಹಿಸಿದ್ದರು

Comments