Big news!! ರಾಜಕೀಯಕ್ಕೆ IPS , ರವಿ ಡಿ ಚನ್ನಣ್ಣ ಅವರು ಗ್ರ್ಯಾಂಡ್ ಎಂಟ್ರಿ, ಕನ್ನಡದ ರೈತ ನಾಯಕನ ಪಕ್ಷಕ್ಕೆ ಸೇರುವೆ ಎಂದ IPS


ರಾಜಕೀಯ ಅಖಾಡಕ್ಕೆ 'ಸಿಂಗಂ ಖ್ಯಾತಿಯ ಅಧಿಕಾರಿ ರವಿ ಡಿ ಚನ್ನಣ್ಣನವರು ಇಳಿಯಲಿದ್ದಾರೆ ಎನ್ನಲಾಗುತ್ತಿದೆ.ಈ ಹಿಂದೆ ತಮಿಳುನಾಡು ಮೂಲದ ಅಣ್ಣಾಮಲೈ ಅವರು ರಾಜ್ಯದಲ್ಲಿ ಐಪಿಎಸ್‌ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ವೈಯುಕ್ತಿಕ ಕಾರಣಕ್ಕಾಗಿ ತಮ್ಮ ಕೆಲಸಕ್ಕೆ ಗುಡ್‌ಬೈ ಹೇಳಿದ್ದರು, ಈಗ ಅದೇ ಸಾಲಿಗೆ ರವಿ ಡಿ ಚನ್ನಣ್ಣವರ್‌ ಸೇರಲಿದ್ದಾರೆ ಎನ್ನಲಾಗುತ್ತಿದೆ.

ರವಿ ಡಿ ಚನ್ನಣ್ಣನವರ್‌ ಅವರು ಪ್ರಖ್ಯಾತ ವಾಗ್ಮಿಯಾಗಿ ಕೂಡ ಗುರುತಿಸಿಕೊಂಡಿದ್ದು, ಅನೇಕ ಸಮಯದಲ್ಲಿ ಮಾಡಿರುವ ಅವರ ಭಾಷಣ ಹಾಗೂ ಮಾತುಗಳು ಯುವಜನತೆ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಇದನ್ನೇ ಎನ್‌ಕ್ಯಾಶ್‌ ಮಾಡಿಕೊಳ್ಳುವುದಕ್ಕೆ ರವಿ ಡಿ ಚನ್ನಣ್ಣನವರ್‌ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ರಾಜ್ಯದ ಪ.ಪಂಗಡದ ಮೀಸಲು ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಕಣದಿಂದ ಇಳಿಯಲಿದ್ದಾರೆ ಎನ್ನಲಾಗುತ್ತಿದ್ದು, ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ಉ.ಕದ ಕ್ಷೇತ್ರವೊಂದರಿಂದ ಕಣಕ್ಕೆ ಇಳಿಯಬಹುದು ಎನ್ನಲಾಗುತ್ತಿದೆ. ಅದರಂತೆಯೇ ರೈತ ನಾಯಕ ಮಣ್ಣಿನ ಮಗ ದೇವೇಗೌಡರ  ಕಾರ್ಯಗಳು ಇವರ ಪ್ರಭಾವಕ್ಕೆ ಬೀರಿದ್ದು ಆದ್ದರಿಂದ ಜೆಡಿಎಸ್ ಸೇರುವ ಮುಂಸ್ಸುಚನೆ ಕೂಡ ರವಿ ಡಿ ಚೆನ್ನಣ್ಣ ಅವರು ನೀಡಿದ್ದಾರೆ

Comments