ಯಡಿಯೂರಪ್ಪ ಸೈನ್ಯಕ್ಕೆ ಕೊಡಲಿ ಏಟು ಕೊಡುತ್ತಿರುವ ಜನರು, ಸಚಿವ ಆರ್ ಅಶೋಕ್ ರಾಜೀನಾಮೆ


ಬಳ್ಳಾರಿಯ ಮರಿಯಮ್ಮನಹಳ್ಳಿ ಬಳಿ ಸಂಭವಿಸಿದ ರಸ್ತೆ ಅಪಘಾತ ಪ್ರಕರಣದಲ್ಲಿ ಕಂದಾಯ ಸಚಿವ ಆರ್‌ ಅಶೋಕ್‌ ಪುತ್ರನ ಪಾತ್ರವಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ತನಿಖೆ ಮುಗಿಯುವವರೆಗೂ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್‌ ಆಗ್ರಹಿಸಿದೆ.

ಈ ಕುರಿತು ಟ್ವಿಟರ್ ನಲ್ಲಿ ಸರಣಿ ಹೇಳಿಕೆ ನೀಡಿರುವ ಕಾಂಗ್ರೆಸ್, ಅಪಘಾತ ಪ್ರಕರಣದ ಬಗ್ಗೆ ರಾಜ್ಯ ಸರಕಾರ ತನಿಖೆ ನಡೆಸುವ ಬದಲು ಸಚಿವರ ಪುತ್ರನ ರಕ್ಷಣೆಗೆ ನಿಂತಿದೆ ಎಂದು ಕಿಡಿಕಾರಿದೆ.

ಘಟನೆ ಸಂಬಂಧ ತಕ್ಷಣ ಶರತ್‌ ಅವರನ್ನು ಬಂಧಿಸಿ ತನಿಖೆ ನಡೆಸಬೇಕು, ತನಿಖೆ ಮುಗಿಯುವವರೆಗೆ ಆರ್. ಅಶೋಕ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.

Comments