ದಾವಣಗೆರೆ ಮಹಾನಗರ ಪಾಲಿಕೆಯ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ !! ಕಾಂಗ್ರೆಸ್ ಭದ್ರಕೋಟೆಯಲ್ಲಿ ಸುಲಭ ಜಯ ಸಾಧಿಸಿದ ಬಿಜೆಪಿ
ದಾವಣಗೆರೆ(ಫೆ. 19): ಅಕ್ರಮ ಮತದಾರರ ಪಟ್ಟಿ ಸೇರ್ಪಡೆ ವಿವಾದದ ಬೆನ್ನಲ್ಲೇ ಇಂದು ನಡೆದ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಪಾಲಿಕೆ ಬಿಜೆಪಿ ವಶವಾಗಿದೆ. ಮೇಯರ್ ಆಗಿ ಬಿಜೆಪಿಯ ಅಜಯ್ ಕುಮಾರ್ ಆಯ್ಕೆಯಾದರು. ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯೆ ಸೌಮ್ಯಾ ನರೇಂದ್ರಕುಮಾರ್ ಅವರಿಗೆ ಉಪಮೇಯರ್ ಸ್ಥಾನ ಒಲಿದಿದೆ.
Advertisement
ಚುನಾವಣೆಯಲ್ಲಿ ವಾಮಮಾರ್ಗದಿಂದ ಪರಿಷತ್ ಸದಸ್ಯರನ್ನ ಮತದಾನಕ್ಕೆ ಪ್ರಕ್ರಿಯೆಗೆ ಸೇರಿಸಿಲ್ಲ. ಮೂರು ಜನ ಕಾಂಗ್ರೆಸ್ ಸದಸ್ಯರನ್ನು ಉದ್ದೇಶಪೂರ್ವಕವಾಗಿ ಗೈರು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಪಕ್ಷ ಮತದಾನ ಪ್ರಕ್ರಿಯೆ ಬಹಿಷ್ಕಾರ ಮಾಡಿತ್ತು. ಇದರಿಂದಾಗಿ ಪಾಲಿಕೆ ಸುಲಭವಾಗಿ ಬಿಜೆಪಿ ವಶವಾಗಿದೆ.
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಒಟ್ಟು 45 ಸದಸ್ಯರಿದ್ದು ಬಿಜೆಪಿ 17, ಕಾಂಗ್ರೆಸ್ 22 , ಪಕ್ಷೇತರ 5 , ಜೆಡಿಎಸ್ನ ಓರ್ವ ಸದಸ್ಯರು ಇದ್ದಾರೆ. ಜೊತೆಗೆ, ಜಿಲ್ಲೆಯ ವಿಧಾನಪರಿಷತ್ ಸದಸ್ಯರು, ವಿಧಾನಸಭಾ ಸದಸ್ಯರು, ಸಂಸದರು ಸೇರಿ ಮತದಾನ ಹಕ್ಕು ಹೊಂದಿದ ಒಟ್ಟು ಸದಸ್ಯರ ಸಂಖ್ಯೆ 62 ಇದೆ. ಗೆಲ್ಲಲು ಬೇಕಾದ ಮ್ಯಾಜಿಕ್ ನಂಬರ್ 32 ಇತ್ತು.

Comments
Post a Comment