ಡಿಕೆಶಿ ಅವರಂತಹ ಉತ್ತಮ ರಾಜಕಾರಣಿ ಯಾರು ಇಲ್ಲಾ !? ಡಿಕೆಶಿ ಅವರು ಮುಖ್ಯಮಂತ್ರಿ ಆಗಬೇಕು ಎಂದು ಹೇಳಿಕೆ ನೀಡಿದ ಬಿಜೆಪಿ ಶಾಸಕ


ರಾಜ್ಯದ ಸಮ್ಮೀಶ್ರ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ  ವಿರುದ್ದ ಬಹಿರಂಗ ಸಮರ ಸಾರಿ ಸರಕಾರದ ಪತನಕ್ಕೆ ಕಾರಣವಾಗಿದ್ದ ರಮೇಶ ಜಾರಕಿಹೊಳಿ ಅವರು ಬಿಜೆಪಿ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರಾಗುತ್ತಿದ್ದಂತೆ ಯೂ ಟರ್ನ್ ಹೊಡೆದಿದ್ದಾರೆ.

ಮಂಗಳವಾರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವ ಒಳ‍್ಳೆಯ ಮನುಷ್ಯ. ಅವನಿಗೂ ಒಳ್ಳೆಯದಾಗಲಿ ಎಂದು ಗೋಕಾಕ್ ಸಾಹುಕಾರ್ ಹಾರೈಸಿ ಅಚ್ಚರಿ ಮೂಡಿಸಿದರು.

ಅದೊಂದು ಕೆಟ್ಟ ಘಟನೆ,ಅದನ್ನು ಪುನಃ ಪುನಃ ಕೆದಕಬೇಡಿ, ನಾನು ಅವರಿಗೆ ನೀಡಿದ್ದ ಖಾತೆಯೇ ಬೇಕು ಎಂದು ಕ್ಯಾತೆ ತೆಗೆದಿರಲಿಲ್ಲ. ನಾನು ಅವರ ಕೊಠಡಿಯನ್ನು ಕೇಳಿಲ್ಲ. ಬೇಕಿದ್ದರೆ ದಾಖಲೆ ನೋಡಿ ಎಂದು ಸ್ಪಷ್ಟಪಡಿಸಿದರು.

ನಾನು ಅವರ ದಾರಿ ತುಳಿಯುತ್ತಿಲ್ಲ ಎಂದು ನುಣುಚಿಕೊಂಡಅವರು ಕಳಸಾ ಬಂಡೂರಿ ಮಹದಾಯಿ ನೀರು ಬಳಕೆಗೆ ಕೇಂದ್ರ ಸರಕಾರ ಈವರೆಗೆ ಅಧಿಸೂಚನೆ ಹೊರಡಿಸದ ಕುರಿತು ಅಧ್ಯಯನ ಮಾಡಿ ಕಾನೂನು ತಜ್ಞರ ಹಾಗೂ ಮಾಜಿ ನೀರಾವರಿ ಸಚಿವರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇರಿಸುವುದಾಗಿ ಸಮಜಾಯಿಸಿ ನೀಡಿದರು.

 ನಾನು ಖಾಸಗಿ ಕಾರ್ಯಕ್ರಮಕ್ಕೆ ನವದೆಹಲಿಗೆ ನಿನ್ನೇಯೇ ಬಂದಿದ್ದೆ. ರಾಜಕೀಯ ನಾಯಕರ ಭೇಟಿ ಕುರಿತು ರಮೇಶ ಜಾರಕಿಹೊಳಿ ಅವರು ಯಾವುದೇ ಸುಳಿವು ನೀಡಲಿಲ್ಲ.

ಡಿಕೆಶಿ ಅವರು ಉತ್ತಮ ರಾಜಕಾರಣಿ ಕೆಲವೊಂದು ಸಮಯ ಅವರ ಸರಿ ಇಲ್ಲದೆ ಇದ್ದ ಕಾರಣ ಅವರು ಕೆಲ ವಿಚಾರಗಳಲ್ಲಿ ಸಿಕ್ಕಿಬಿದ್ದರು, ಮುಖ್ಯಮಂತ್ರಿ ಆಗುವಂತಹ ಎಲ್ಲಾ ಲಕ್ಷಣಗಳನ್ನು ಡಿಕೆ ಶಿವಕುಮಾರ್ ಅವರು ಹೊಂದಿದ್ದಾರೆ

Comments