ಮೊದಲ ಪತ್ನಿಯಿಂದ ವಿಚ್ಛೇದನ ಪಡೆಯದೆ ಎರಡನೇ ಮದುವೆಯಾಗಿದ್ದ ಬಿಜೆಪಿ ಶಾಸಕನೊಬ್ಬನಿಗೆ ಪತ್ನಿ ಹಾಗೂ ಆಕೆಯ ತಾಯಿ ಸಾರ್ವಜನಿಕರ ಸಮ್ಮುಖದಲ್ಲೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಅರ್ನಿ ಕ್ಷೇತ್ರದ ಬಿಜೆಪಿ ಶಾಸಕ ರಾಜು ನಾರಾಯಣ್ ಟೋಡ್ಸಮ್, ಇತ್ತೀಚೆಗೆ ಪ್ರಿಯಾ ಶಿಂಧೆ ಎಂಬಾಕೆಯೊಂದಿಗೆ ಎರಡನೇ ಮದುವೆಯಾಗಿದ್ದು, ತನ್ನ 42 ನೇ ವರ್ಷದ ಹುಟ್ಟು ಹಬ್ಬವನ್ನು ಹೊಸ ಪತ್ನಿ ಹಾಗೂ ಕಾರ್ಯಕರ್ತರೊಂದಿಗೆ ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದರು.
ಈ ವೇಳೆ ಸ್ಥಳಕ್ಕೆ ಬಂದ ಮೊದಲ ಪತ್ನಿ ಅರ್ಚನಾ ಹಾಗೂ ಆಕೆಯ ತಾಯಿ, ಪ್ರಿಯಾ ಶಿಂಧೆಗೆ ಥಳಿಸಲು ಆರಂಭಿಸಿದ್ದಾರೆ. ಇದನ್ನು ಬಿಡಿಸಲು ಬಂದ ಶಾಸಕ ರಾಜು ಅವರಿಗೂ ಹಿಗ್ಗಾಮುಗ್ಗಾ ಗೂಸಾ ಬಿದ್ದಿವೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವರು ಕಮೆಂಟ್ ಮಾಡುತ್ತಿದ್ದಾರೆ.

Comments
Post a Comment