ಇದೀಗ ಬಂದ ಸುದ್ದಿ !!ಸಿದ್ದರಾಮಯ್ಯ ಅವರ ಪ್ರಭಾವದಿಂದ ಕಾಂಗ್ರೆಸ್ ಪಕ್ಷಕ್ಕೆ ಮರಳಿದ ರಮೇಶ್ ಜಾರಕಿಹೊಳಿ


ಗೋಕಾಕ ಸಹೋದರರಾದ ರಮೇಶ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ಬೀದಿ ಜಗಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಾರಕಿಹೊಳಿ ಸಹೋದರರು ಈಗ ಒಂದಾಗಿಲ್ಲ, ನಾವು ಬೇರೆ ಬೇರೆ ಎಂದು ಸತೀಶ್ ಈಚೆಗಷ್ಟೆ ಹೇಳಿದ್ದರು. ಹಲವಾರು ವಯಕ್ತಿಕ ವಿಷಯಗಳನ್ನೂ ಇಬ್ಬರೂ ಆರೋಪ ಪ್ರತ್ಯಾರೋಪಗಳಿಗೆ ಬಳಸಿದ್ದರು.

ಇದೀಗ ಸತೀಶ್ ಜಾರಕಿಹೊಳಿ ಗೋಕಾಕ ಕ್ಷೇತ್ರದ ಉಪಚುನಾವಣೆಯ ಪ್ರಚಾರವನ್ನು ಆರಂಭಿಸಿದ್ದಾರೆ. ಡಿ.5ರಂದು ನಡೆಯಲಿರುವ ಉಪಚುನಾವಣೆಗೆ ಲಖನ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಸತೀಶ್, ಅವರ ಪರವಾಗಿ ಈಗಲೇ ಜೋರಾಗಿ ಪ್ರಚಾರ ನಡೆಸಿದ್ದಾರೆ.

ವಿಶೇಷವೆಂದರೆ ಸತೀಶ್ ಜಾರಕಿಹೊಳಿ ಪ್ರಚಾರ ಭಾಷಣದ ಮುಖ್ಯ ವಿಷಯ ರಮೇಶ ಜಾರಕಿಹೊಳಿ. ರಮೇಶ್ ಜಾರಕಿಹೊಳಿ ಕಳೆದ 30 ವರ್ಷದಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಬದಲಾಗಿ ಅವರ ಸಹಚರರು ಗೋಕಾಕನ್ನು ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಗೋಕಾಕ ಕ್ಷೇತ್ರವನ್ನು ಮಾದರಿ ಮಾಡಬೇಕೆೆನ್ನುವುದು ನಮ್ಮ ಉದ್ದೇಶವಾಗಿತ್ತು. ಆದರೆ ರಮೇಶ ಸಂಪೂರ್ಣ ಹಾಳುಗೆಡವಿದ್ದಾರೆ ಎಂದು ದೂರುತ್ತಿದ್ದಾರೆ.

ನಿನ್ನೆ ರಾತ್ರಿ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಸತೀಶ್ ಜಾರಕಿಹೊಳಿ, ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಮಮದಾಪುರದಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದ ಸತೀಶ್ ರಮೇಶ್ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದರು. ರಮೇಶ್ ಬಿಜೆಪಿಯನ್ನು ಉದ್ದಾರ ಮಾಡಲು ಹೋಗಿಲ್ಲ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಲೂ ಹೋಗಿಲ್ಲ.

ಸಾಕಷ್ಟು ಸಾಲ ಮಾಡಿಕೊಂಡಿರುವ ರಮೇಶ್ ಬಿಜೆಪಿಯಿಂದ ಹಣ ವಸೂಲಿ ಮಾಡಿಕೊಂಡು ಸಾಲ ತೀರಿಸಲು ಹೋಗಿದ್ದಾರೆ. ಸಾಲ ತೀರಿದ ನಂತರ ಮರಳಿ ಕಾಂಗ್ರೆಸ್ ಗೆ ಬರುತ್ತಾರೆ. ಈ ವಿಷಯವನ್ನು ರಮೇಶ್ ಅವರೇ ತನ್ನ ಆಪ್ತರ ಬಳಿ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಸತೀಶ್ ಹೇಳಿದರು.

Comments