ಮಾಜಿ ಸಚಿವ ಡಿ .ಕೆ ಶಿವಕುಮಾರ್ ಮತ್ತು ಡಾ.ಜಿ ಪರಮೇಶ್ವರ್ ಮೇಲಿನ ಐಟಿ, ಇಡಿ ದಾಳಿ ಬೆನ್ನಲ್ಲೇ ಮಾಜಿ ಐಪಿಎಸ್ ಅಧಿಕಾರಿಯೂ ಆಗಿರುವ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಪಕ್ಷ ತೊರೆದಿದ್ದಾರೆ.
ಇಂದು ದೆಹಲಿಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಸೇರಿಕೊಳ್ಳುವ ಉದ್ದೇಶದಿಂದ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜೀನಾಮೆ ನಂತರ ಕಾಂಗ್ರೆಸ್ ವಿರುದ್ಧ ರಾಮಮೂರ್ತಿ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಕಾಂಗ್ರೆಸ್, ಇದು ಬಿಜೆಪಿಯ ಕುತಂತ್ರ ಅಂತಿದೆ

Comments
Post a Comment