ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೇಂದ್ರ ಬಿಜೆಪಿ ನಾಯಕರ ವಿರುದ್ಧ ಮೃಧು ಧೋರಣೆ ತೋರುತ್ತಿದ್ದಾರೆ. ಬಿಜೆಪಿ ಜೊತೆ ಕೈ ಜೋಡಿಸಲು ದಳಪತಿಗಳು ನಿರ್ಧರಿಸಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಮಂಡ್ಯದ ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಸುರೇಶ್ ಗೌಡರ ಹೇಳಿಕೆ ಇಂತಹದ್ದೊಂದು ಸುಳಿವು ನೀಡಿದೆ.
ನಾಗಮಂಗಲದಲ್ಲಿ ಮಾತನಾಡಿರುವ ಅವರು, ಉಪ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬಿಜೆಪಿ ಗೆಲ್ಲೋದಿಲ್ಲ. ಅದಕ್ಕಾಗಿ ಎರಡನೇ ಹಂತದ ಆಪರೇಷನ್ ಕಮಲ ಮಾಡಬಹುದು. ಗೌರವವಾಗಿ ನಮ್ಮನ್ನು ನಡೆಸಿಕೊಂಡ್ರೆ ಸಪೋರ್ಟ್ ಮಾಡೋಣ ಎಂದು ತೀರ್ಮಾನ ಮಾಡಿದ್ದು, ನಾವೇ ಓಪನ್ ಆಗಿ ಆಫರ್ ನೀಡಿದಾಗ ಈ ಆಪರೇಷನ್ ಏತಕ್ಕೆ ಬೇಕಿತ್ತು..? ಅಂತಾ ಬಿಜೆಪಿಗೆ ಬೆಂಬಲ ಕೊಡೋದಾಗಿ ಆಫರ್ ನೀಡಿದ್ದನ್ನು ಸುರೇಶ್ ಗೌಡ ಒಪ್ಪಿಕೊಂಡಿದ್ದಾರೆ.
ಅಲ್ಲದೇ, ಬಿಜೆಪಿಗೆ ಬೆಂಬಲಿಸುವ ಬಗ್ಗೆ ಕುಮಾರಸ್ವಾಮಿ ಅವ್ರು ಸೇರಿದಂತೆ ಜೆಡಿಎಸ್ ಶಾಸಕರು ಚರ್ಚೆ ಮಾಡಿದ್ರು.

Comments
Post a Comment