ಇದೀಗ ಬಂದ ಸುದ್ದಿ !! ಉಪಚುನಾವಣೆಗೆ 12 ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಹೊರ ಹಾಕಿದ ಕಾಂಗ್ರೆಸ್, 12 ರಲ್ಲಿ 10 ಯುವ ನಾಯಕರ ಹೆಸರು
ರಾಜ್ಯದಲ್ಲಿ ನಡೆಯುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದ್ದು, ಈಗಾಗಲೇ 12 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದ್ದು, ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದ್ದು, ತೀರ್ಪು ಬಂದ ನಂತರ ಉಳಿದ 3 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಹ ಅಂತಿಮವಾಗಲಿದೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಕ್ಷರ ಬದಲಾವಣೆ ವಿಷಯ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನನಗೆ ಈ ವಿಷಯ ಗೊತ್ತಿಲ್ಲ. ಅಂಥ ಬೆಳವಣಿಗೆ ಸಹ ಈಗ ನಡೆದಿಲ್ಲ. ಮೇಲಾಗಿ ಡಿ.ಕೆ.ಶಿವಕುಮಾರ್ ಸಹಿತ ಯಾರೇ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕೇಳಿದರೂ ತಪ್ಪಿಲ್ಲ. ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು.
ಹೊಸಕೋಟೆ - ಪದ್ಮಾವತಿ
ಕೆ ಆರ್ ಪುರ - ಎಮ್ಮೆಲ್ಸಿ ನಾರಾಯಣ ಸ್ವಾಮಿ
ಶಿವಾಜಿನಗರ - ರಿಜ್ವಾನ್ ಅರ್ಷದ್ ಅಥವಾ ಸಲೀಂ ಅಹಮದ್
ಮಹಾಲಕ್ಷ್ಮಿ ಲೇಔಟ್ - ಕಾರ್ಪೊರೇಟರ್ ಶಿವರಾಜ್ ಅಥವಾ ಮಂಜುನಾಥ್ ಗೌಡ
ಯಶವಂತಪುರ - ಎಂ. ರಾಜಕುಮಾರ್
ಚಿಕ್ಕಬಳ್ಳಾಪುರ - ಜಿ.ಎಚ್.ನಾಗರಾಜ್ ಅಥವಾ ಆಂಜಿನಪ್ಪ ಯಲವಳ್ಳಿ ರಮೇಶ್

Comments
Post a Comment