ತಮ್ಮ ಅನರ್ಹತೆಯನ್ನು ಪ್ರಶ್ನಿಸಿ 17 ಮಂದಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆದಿದ್ದು, ಇಂದು ಬೆಳಗ್ಗೆ ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹಟಗಿ ತಮ್ಮ ವಾದ ಮಂಡಿಸಿದ್ದರು.
ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಸ್ಪೀಕರ್ ಪರ ವಕೀಲರಾದ ತುಷಾರ್ ಮೆಹ್ತಾ ತಮ್ಮ ವಾದವನ್ನು ಮಂಡಿಸಿದ್ದು, ಅಚ್ಚರಿಯ ಸಂಗತಿಯೆಂದರೆ ಅವರು ಅನರ್ಹ ಶಾಸಕರ ಪರವಾಗಿಯೇ ತಮ್ಮ ವಾದ ಮಂಡಿಸುತ್ತಿದ್ದಾರೆ.
ಈ ಮೊದಲು ಮೈತ್ರಿಕೂಟ ಸರ್ಕಾರ ಅಧಿಕಾರದಲ್ಲಿದ್ದಾಗ ಸ್ಪೀಕರ್ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸುತ್ತಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಕೀಲರನ್ನು ಬದಲಾಯಿಸಲಾಗಿತ್ತು.
ಇದೀಗ ಸ್ಪೀಕರ್ ಪರ ವಕೀಲರು, 17 ಮಂದಿ ಶಾಸಕರುಗಳು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದು, ಅನರ್ಹತೆ ವಿಚಾರಕ್ಕಿಂತ ಮೊದಲು ರಾಜೀನಾಮೆ ವಿಚಾರವನ್ನು ಸ್ಪೀಕರ್ ಪರಿಗಣಿಸಬೇಕಿತ್ತು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Comments
Post a Comment