ಬಿಜೆಪಿಯಲ್ಲಿ ಸ್ಪೋಟಗೊಂಡ ಅಸಮಾಧಾನ, ಬಿಜೆಪಿ ಗೆ ಸೆಡ್ಡು ಹೊಡೆದು ಕಾಂಗ್ರೆಸ್ ಕಡೆ ಮುಖ ಮಾಡಿದ ಬಿಜೆಪಿ ಶಾಸಕ


ನಾನೂ 4 ಬಾರಿ ಶಾಸನಾಗಿದ್ದು, ಪಕ್ಷಕ್ಕಾಗಿ ವಿದ್ಯಾರ್ಥಿ ದೆಸೆಯಿಂದ ದುಡಿದ್ದು, ಪಕ್ಷಕ್ಕೆ ಹಾನಿ ಮಾಡಲು ಬಯಸದೇ, ಪಕ್ಷ ಕಟ್ಟಲು ಶ್ರಮ ಪಡುತ್ತೇನೆ. ಸಚಿವ ಸ್ಥಾನ ಸಿಗದೇ ಇರುವುದು ಖಂಡಿತ ನೋವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ನಾಲ್ಕು ಬಾರಿ ಶಾಸಕನ್ನಾಗಿ ಬಿಜೆಪಿ ಪಕ್ಷವನ್ನು ಬೆಳಸಿದ್ದೇನೆ. ಆದರೆ ನನಗೆ ಈ ಬಾರಿ ಸಚಿವ ಸ್ಥಾನ ನೀಡಿದಕ್ಕೆ ತೀರಾ ಬೇಸರ ಆಗಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ. ನಮ್ಮ ಭಾಗದಲ್ಲಿ ನಾನು ಪಕ್ಷವನ್ನು ಕಟ್ಟಲು ತುಂಬಾ ಪ್ರಯತ್ನ ಮಾಡಿದ್ದೇನೆ.

ನಾನೂ 4 ಬಾರಿ ಶಾಸನಾಗಿದ್ದು, ಪಕ್ಷಕ್ಕಾಗಿ ವಿದ್ಯಾರ್ಥಿ ದೆಸೆಯಿಂದ ದುಡಿದ್ದು, ಪಕ್ಷಕ್ಕೆ ಹಾನಿ ಮಾಡಲು ಬಯಸದೇ, ಪಕ್ಷ ಕಟ್ಟಲು ಶ್ರಮ ಪಡುತ್ತೇನೆ. ಸಚಿವ ಸ್ಥಾನ ಸಿಗದೇ ಇರುವುದು ಖಂಡಿತ ನೋವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಹಿರಿಯರು ನಮ್ಮ ಕೆಲಸವನ್ನು ನೋಡಿ ಇನ್ನು ಒಳ್ಳೆಯ ಸ್ಥಾನಮಾನ ನೀಡಬೇಕು. ನಾನು ಪಕ್ಷದ ತತ್ವ ಸಿದ್ಧಾಂತಗಳ ನಡುವೆ ಬೆಳೆದವನಾಗಿದ್ದು. ನನಗೂ ಸಚಿವ ಸ್ಥಾನದ ನಿರೀಕ್ಷೆ ಇತ್ತು ಆದರೆ ಹಾಗೆ ಆಗಲಿಲ್ಲ, ಹಿರಿಯರಿಗೆ ಅವಕಾಶ ನೀಡಲು ನನ್ನನ್ನು ಕಡೆಗಣಿಸಬಾರದು. ಸರ್ಕಾರ ನಮ್ಮದು ಎಂಬುದು ಸಂತೋಷ ನಮಗೆ ಇದೆ ಎಂದು ಹೇಳಿದರು.

ನನಗೆ ಲಾಬಿ ಮಾಡಲು ಬರುವುದಿಲ್ಲ. ನನಗೆ ಯಾವಾಗಲೂ ಲಾಬಿ ಮಾಡಿಯೂ ಗೊತ್ತಿಲ್ಲ. ಪಕ್ಷ ಮೊದಲು ಎಂದು ಯೋಚನೆ ಮಾಡುವವನು ನಾನು. ಸಚಿವ ಈಶ್ವರಪ್ಪ ಹಾಗೂ ಸಿಎಂ ಯಡಿಯೂರಪ್ಪನವರ ನಡುವೆ ಬೆಳೆದವನು ಹಾಗಾಗಿ ಯಾರಿಗೂ ಕೇಳಬೇಕಿಲ್ಲ, ಯಡಿಯೂರಪ್ಪನವರೆ ತಿಳಿದುಕೊಂಡು ಕೊಡಬೇಕಿತ್ತು. ಕ್ಷೇತ್ರದ ಜನತೆ ನನಗೆ ಸಚಿವ ಸ್ಥಾನ ಸಿಗುತ್ತೆ ಎಂದು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ನಿಗಮ ಮಂಡಳಿಯ ಬಗ್ಗೆ ನನಗೆ ಯಾವುದೇ  ಆಸಕ್ತಿ ಇಲ್ಲ ಎಂದು ಆರಗ  ತಿಳಿಸಿದರು.

Image result for mla araga jnanendra
ನಾಲ್ಕು ಬಾರಿ ಶಾಸಕರಾದರೂ ಸಿಗಲಿಲ್ಲ ಮಂತ್ರಿ ಪಟ್ಟ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಶಾಸಕ ಆರಗ ಜ್ಞಾನೇಂದ್ರ ಅವರು, 1983ರಲ್ಲಿ ಒಟ್ಟಿಗೆ ಚುನಾವಣೆ ರಾಜಕೀಯಕ್ಕೆ ಧುಮುಕಿದ್ದರು. 1983, 1985 ಮತ್ತು 1989ರ ವಿಧಾನ ಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿ ಸತತ ಸೋಲನುಭವಿಸಿದರು.

1999 ಹಾಗೂ 2004ರಲ್ಲಿ  ವಿಧಾನ ಸಭಾ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ  ಅವರು ಮೂರು ಬಾರಿ ಗೆಲುವು ಸಾಧಿಸಿದ್ದರು. ಇದಾದ ಬಳಿಕ 2008 ಮತ್ತು 2013ರ ವಿಧಾನ ಸಭಾ ಚುನಾವಣೆಯಲ್ಲಿ ಸೋತು 2018ರ ಚುನಾವಣೆಯಲ್ಲಿ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ. 2008ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಸಚಿವ ಸ್ಥಾನ ಸಿಗಲಿಲ್ಲ. ಆದರೆ ಎಂಪಿಎಂ ಕಾರ್ಖಾನೆಯ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಪಡಿಸಲಾಯಿತು

Comments