ರಾಜಕೀಯಕ್ಕೆ ಎಂಟ್ರಿ ಕೊಟ್ಟ ರಾಧಿಕಾ ಕುಮಾರಸ್ವಾಮಿ !! ರಾಧಿಕಾ ಸ್ಪರ್ಧಿಸುವ ಕ್ಷೇತ್ರ ಯಾವುದು ಗೊತ್ತಾ ??


ಸ್ಯಾಂಡಲ್ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿರುವುದು ಗೊತ್ತಿರುವ ವಿಷಯ. ಅದರಲ್ಲೂ ‘ದಮಯಂತಿ’ ಚಿತ್ರದಲ್ಲಿ ರೌದ್ರಾವತಾರ ತಾಳಿ ಟೀಸರ್ ಮೂಲಕವೇ ಮೋಡಿ ಮಾಡಿದ್ದಾರೆ.



ಸದ್ಯ ‘ದಮಯಂತಿ’ ಮತ್ತು ‘ಭೈರಾದೇವಿ’ಯನ್ನು ನೆಚ್ಚಿಕೊಂಡಿರುವ ಸ್ವೀಟಿ ನಟಿ, ಎರಡು ಚಿತ್ರಗಳ ಮೇಲೆ ಅಪಾರ ವಿಶ್ವಾಸವಿರಿಸಿಕೊಂಡಿದ್ದಾರೆ. ಅದರಲ್ಲೂ ‘ದಮಯಂತಿ’ ಚಿತ್ರ ಪಂಚಭಾಷೆಯಲ್ಲಿ ತೆರೆಕಾಣಲಿದ್ದು, ಈ ಮೂಲಕ ಇಡೀ ಭಾರತೀಯ ಚಿತ್ರರಂಗ ಗಮನ ಸೆಳೆಯಲು ರಾಧಿಕಾ ಹೊರಟಿದ್ದಾರೆ.


‘ದಮಯಂತಿ’ ಚಿತ್ರದ ಟೀಸರ್ ಸಮಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿರುವ ರಾಧಿಕಾ, ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಕೆಲ ದಿನಗಳ ಹಿಂದೆ ರಾಧಿಕಾ ರಾಜಕೀಯಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

 à²
ಈ ಬಗ್ಗೆ ಮಾತನಾಡಿದ ‘ನಿನಗಾಗಿ’ ಸುಂದರಿ, ನನಗೆ ಸಣ್ಣ ವಯಸ್ಸಿನಿಂದಲೇ ಸಿನಿಮಾ ಅಂದರೆ ಜೀವ. ಈಗಲೂ ನಾನು ಸಿನಿಮಾವನ್ನು ತುಂಬಾ ಇಷ್ಟಪಡುತ್ತೇನೆ. ಚಿತ್ರರಂಗ ಎಂದರೆ ನನ್ನ ತಂದೆ ತಾಯಿಗೂ ತುಂಬಾ ಇಷ್ಟವಿತ್ತು. ಹೀಗಾಗಿ ಡ್ಯಾನ್ಸ್ ಗೊತ್ತಿಲ್ಲದಿದ್ದರೂ, ನೋಡುತ್ತಲೇ ನಾನು ನೃತ್ಯ ಕಲಿತೆ. ಈಗ ಸಿನಿರಂಗದಲ್ಲಿದ್ದೇನೆ. ಎಷ್ಟು ದಿನ ಸಿನಿಮಾ ಮಾಡಲು ಸಾಧ್ಯನೋ, ಅಷ್ಟು ದಿನ ಕೂಡ ಸಿನಿಮಾಗಳನ್ನು ಮಾಡುತ್ತೇನೆ ಎಂದರು.


ಇನ್ನು ನನಗೆ ನಾಯಕಿಯಾಗಲು ಸಾಧ್ಯವಾಗದಿದ್ದರೆ, ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಮುಂದುವರೆಯುವುದಾಗಿ ರಾಧಿಕಾ ಕುಮಾರಸ್ವಾಮಿ ತಿಳಿಸಿದ್ದಾರೆ. ಇದೇ ವೇಳೆ ರಾಜಕೀಯ ಸುದ್ದಿಗಳ ಬಗ್ಗೆ ಮಾತನಾಡಿದ ಸ್ಯಾಂಡಲ್ವುಡ್ ಸ್ವೀಟಿ, ನಾನು ಚಿತ್ರರಂಗದಲ್ಲೇ ಮುಂದುವೆರೆಯುವುದಾಗಿ ತಿಳಿಸಿದ್ದಾರೆ. ಪೊಲಿಟಿಕ್ಸ್ಗೆ ಬರುವ ಯಾವುದೇ ಉದ್ದೇಶವಿಲ್ಲ ಎನ್ನುವ ಮೂಲಕ ರಾಜಕೀಯ ಎಂಟ್ರಿಯ ಬಗ್ಗೆ ಇದ್ದಂತಹ ಕುತೂಹಲಕ್ಕೆ ತೆರೆ ಎಳೆದಿದ್ದಾರೆ

Refer from - opera news

Comments