ಬಿಸಿ ಬಿಸಿ ಸುದ್ದಿ !! ಬಿಜೆಪಿ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ದ್ರಾವಿಡ್ !!


ಬೆಂಗಳೂರು : ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಇಂದು ಮಾಜಿ ಕ್ರಿಕೆಟಿಗ ಹಾಗೂ ಟೀಂ ಇಂಡಿಯಾದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಮನೆಗೆ ದಿಢೀರ್ ಭೇಟಿ ನೀಡಿದರು. ಬಿಜೆಪಿ ಹಿರಿಯ ನಾಯಕರ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದ್ದು, ರಾಹುಲ್ ದ್ರಾವಿಡ್ ರಾಜಕೀಯ ರಂಗಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ.

Image result for jp nadda
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಹಾಗೂ ವಿಶೇಷಾಧಿಕಾರ ನೀಡುತ್ತಿದ್ದ ಸಂವಿಧಾನದ 35 ಎ ಹಾಗೂ 370ನೇ ವಿಧಿ ಕುರಿತು ಪುಸ್ತಕವನ್ನು ರಾಹುಲ್ ದ್ರಾವಿಡ್ ಅವರಿಗೆ ಕೊಡಲೆಂದು ಜೆ.ಪಿ. ನಡ್ಡಾ ತೆರಳಿದ್ದರು ಎಂಬುದು ಖಚಿತಪಟ್ಟಿತು.


ಆದರೂ ಜೆ.ಪಿ.ನಡ್ಡಾ ದಿಢೀರ್ ಭೇಟಿ ನೀಡಿದ್ದು ಯಾಕೆ ಎಂಬ ಕುತೂಹಲವೂ ಸೃಷ್ಟಿಯಾಗಿದೆ.

ಕೇಂದ್ರ ಸಚಿವರಾದ ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಅರುಣ್ ಕುಮಾರ್ ಸೇರಿ ಬಿಜೆಪಿಯ ಇನ್ನೂ ಹಲವು ನಾಯಕರು ಜೆ.ಪಿ. ನಡ್ಡಾ ಅವರೊಂದಿಗೆ ರಾಹುಲ್ ದ್ರಾವಿಡ್ ನಿವಾಸಕ್ಕೆ ತೆರಳಿದ್ದರು

Comments