ಬಿಜೆಪಿ ಪಕ್ಷ ತಮಗೆ ಮುಂಬರುವ ಚುನಾವಣೆಗಳಲ್ಲಿ ತಮಗೆ ಟಿಕೆಟ್ ನೀಡುವುದಾಗಿ ಭರವಸೆ ಹೊಂದಿದ್ದ ಅನರ್ಹ ಶಾಸಕರಲ್ಲಿ ಈಗ ಅಸಮಾಧಾನ ಭುಗಿಲೆದ್ದಿದೆ!. ಬಿಜೆಪಿಗಾಗಿ ತಮ್ಮ ಪಕ್ಷವನ್ನು ತೊರೆದು ಸರ್ಕಾರವನ್ನು ಬೀಳಿಸಿ ಮುನ್ನಡೆದ ಶಾಸಕರು ಈಗ ಸ್ವಪಕ್ಷಕ್ಕೂ ಬೇಡವಾಗಿ, ಬಿಜೆಪಿಗೂ ಬೇಡವಾಗಿ ತ್ರಿಶಂಕು ಸ್ಥಿತಿಯಲ್ಲಿ ಎಲ್ಲರಿಂದ ಟೀಕೆಗೊಳಗಾಗಿದ್ದಾರೆ. ಈಗಿನ ಆಡಳಿತ ಸರ್ಕಾರದಲ್ಲಂತೂ ಖಾತೆ ಸಿಗಲಿಲ್ಲ. ಈಗ ಮುಂಬರುವ ಉಪ ಚುನಾವಣೆಯಲ್ಲಾದರೂ ಸ್ಪರ್ಧಿಸೋಣ ಅಂದರೆ ಅದಕ್ಕೂ ಬಿಜೆಪಿಯಿಂದಲೇ ಅಡ್ಡಗಾಲು. ಪರಿಸ್ಥಿತಿ ಹೀಗಿರುವಾಗ, ಎಲ್ಲಾ ಹದಿನೈದು ಕ್ಷೇತ್ರಗಳ ಪಕ್ಷದ ನಾಯಕರು, ಅನರ್ಹ ಶಾಸಕರ ಕುಟುಂಬಗಳಿಗೆ ಟಿಕೆಟ್ ನೀಡುವ ಬಿಜೆಪಿಯ ನಿರ್ಧಾರವನ್ನು ವಿರೋಧಿಸಿ ಹೊರಬಂದಿದ್ದಾರೆ.
ಟಿಕೆಟ್ ನೀಡದಿದ್ದಲ್ಲಿ ಕಾಂಗ್ರೆಸ್ ಮತ್ತು ಜೆಡಿ (ಎಸ್) ಗೆ ಸೇರ್ಪಡೆಗೊಳ್ಳುವ ಒಲವನ್ನು ವ್ಯಕ್ತಪಡಿಸಿದ್ದಾರೆ. ಎಂಟಿಬಿ ನಾಗರಾಜ್ ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಿದರೆ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಹೊಸ್ಕೋಟೆ ಕ್ಷೇತ್ರದ ಬಿಜೆಪಿ ನಾಯಕ ಶರತ್ ಬಚ್ಚೆ ಗೌಡ ಅವರು ಸ್ಥಳೀಯ ನಾಯಕರ ಸಭೆ ಕರೆದಿದ್ದಾರೆ. ಮಾಜಿ ಕಾಂಗ್ರೆಸ್ ಮುಖಂಡ ಮತ್ತು ಶಿವಾಜಿನಗರ ಕ್ಷೇತ್ರದಿಂದ ಅನರ್ಹಗೊಂಡ ಶಾಸಕ ಆರ್. ರೋಶನ್ ಬೇಗ್ ಅವರ ಕುಟುಂಬಕ್ಕೆ ಟಿಕೆಟ್ ನೀಡಲು ಬಿಜೆಪಿ ಪಕ್ಷದ ನಾಯಕ ಕಟ್ಟಾ ಸುಬ್ರಮಣ್ಯ ನಾಯ್ಡು ವಿರೋಧಿಸುತ್ತಿದ್ದಾರೆ

Comments
Post a Comment