ಸಿಎಂ ಬಿಎಸ್ ಯಡಿಯೂರಪ್ಪ ಅವರ ಸರಕಾರ ಪೂರ್ಣಾವಧಿ ಪೂರೈಸುವ ಬಗ್ಗೆ ಮಾತನಾಡಿದ ಕೋಡಿಹಳ್ಳಿ ಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಚುನಾವಣೆ ಪೂರ್ವದಲ್ಲೇ ಹೇಳಿದಂತೆ ಒಂದು ವರ್ಷ 18 ತಿಂಗಳಲ್ಲಿ ಮತ್ತೆ ಮತ ಬೇಡುತ್ತಾರೆ ಎಂದು ತಮ್ಮ ಭವಿಷ್ಯವನ್ನು ಪುನರಾವರ್ತಿಸಿದ್ದಾರೆ.
Image result for à²à³à²¡à²¿ ಮಠಶà³à²°à³à²à²³à³
ಬರುವ ದಿನಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಶುಭ ಸೂಚನೆ ಇದೆ ಎಂದು ಮತ್ತೆ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂದು ಕೋಡಿ ಮಠ ಶ್ರೀಗಳು ಪರೋಕ್ಷವಾಗಿ ಭವಿಷ್ಯ ನುಡಿದಿದ್ದಾರೆ.
Image result for à²à³à²¡à²¿à²®à² ಶà³à²°à³à²à²³à³ siddaramaiah
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗಂಗೆಮಡುವಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಮತ್ತೆ ಕೆಲವೇ ತಿಂಗಳಲ್ಲಿ ಚುನಾವಣೆ ಬರಲಿದೆ, ಸಿದ್ದರಾಮಯ್ಯರಿಗೆ ನೀವು ರಾಜ್ಯದ ಗದ್ದುಗೆ ಹಿಡಿದಿದ್ದೀರಿ. ನೀವು ದೆಹಲಿಯ ಗದ್ದುಗೆ ಹಿಡಿಯಿರಿ ಎಂದು ಸಿದ್ದರಾಮಯ್ಯಗೆ ಸಲಹೆ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದರು.
ಅಲ್ಲದೇ ಹಾಲುಮತ ಸಮಾಜದವರು ಇಡೀ ಭಾರತದಾದ್ಯಂತ ಎಲ್ಲಾ ರಾಜ್ಯಗಳಲ್ಲಿ ನೆಲೆಸಿದ್ದಾರೆ. ನಾನು ಹಿಂದೆಯೇ ಹೇಳಿದ್ದೆ ಕಂಬಳಿ ಹಾಸೀತು ಅಂಬಳಿ ಹಳಸೀತು, ಸಿದ್ದು ಗದ್ದುಗೆ ಹಾಸೀತು ಎಂದು ಈ ಹಿಂದೆ ಹೇಳಿದ್ದೆ, ಆಗ ಸಿದ್ದರಾಮಯ್ಯ ಸಿಎಂ ಆಗಿದ್ದರು ನನ್ನ ಮಾತು ಸುಳ್ಳಾಗಲಿಲ್ಲ, ಈಗ ಮತ್ತೆ ಸಿದ್ದರಾಮಯ್ಯಗೆ ಶುಭ ಸೂಚನೆ ಇದೆ ಎಂದು ಹಾಸನದಲ್ಲಿ ಕೋಡಿ ಮಠದ ಶ್ರೀಗಳು ತಿಳಿಸಿದ್ದಾರೆ.

Comments
Post a Comment