ಬಿ ಎಸ್ ವೈ ಕಡೆಗಣಿಸುತ್ತಿರುವ ರಾಜ್ಯಾಧ್ಯಕ್ಷರಿಗೆ ಬಿಸಿ ಮುಟ್ಟಿಸಿದ ಮುಖಂಡರು !! 13 ಜನ ಸಾಮೂಹಿಕ ರಾಜೀನಾಮೆ ಪತ್ರವನ್ನು ರಾಜ್ಯಾಧ್ಯಕ್ಷರಿಗೆ ರವಾನೆ


ನಳೀನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾದಾಗಿಂದ ಸಿಎಂ ಯಡಿಯೂರಪ್ಪರನ್ನ ಮತ್ತು ಅವರ ಪುತ್ರ ವಿಜಯೇಂದ್ರರನ್ನ ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.


ಇದಕ್ಕೆ ಸಂಬಂಧಿಸಿದಂತೆ ನಳೀನ್ ಕುಮಾರ್ ಕಟೀಲ್‌ಗೆ ಪತ್ರ ಬರೆದ ರಾಜ್ಯ ಬಿಜೆಪಿಯ ಯುವಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್, ಇದು ಹೀಗೆ ಮುಂದುವರೆದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.


ಸುರಾನಾ ಹಾಗೂ ಭಾನುಪ್ರಕಾಶ್ ಅವ್ರನ್ನ ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಸಂಘಟನೆಯನ್ನ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದವರನ್ನ ಮುಲಾಜಿಲ್ಲದೆ ಹೊರಗಿಟ್ಟು ಪಕ್ಷ ಸಂಘಟನೆ ಮಾಡಿದ್ದು ಯಡಿಯೂರಪ್ಪ. ಕಳೆದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಾಧನೆಗೆ ಯಡಿಯೂರಪ್ಪ ಕಾರಣ. ಅವ್ರನ್ನ ಕಡೆಗಣನೆ ಮಾಡಿದ್ರೆ ಉತ್ತರ ಕರ್ನಾಟಕ ಭಾಗದ ಬಿಜೆಪಿ ಕಾರ್ಯಕರ್ತರು ಸುಮ್ಮನಿರಲ್ಲ. ಬಿ.ವೈ.ವಿಜಯೇಂದ್ರ ಅವ್ರನ್ನೂ ತುಳಿಯುವ ಪ್ರಯತ್ನಗಳು ನಡೆಯುತ್ತಿವೆ.


ಪರಿಸ್ಥಿತಿ ಹೀಗೆ ಮುಂದುವರೆದರೆ ಉ.ಕ ಭಾಗದ 13 ಜಿಲ್ಲೆಗಳ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ಕೊಡ್ತಾರೆ ಎಂದು ಭೀಮಾಶಂಕರ್ ಎಚ್ಚರಿಕೆ ನೀಡಿದ್ದಾರೆ.

Comments