ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಎರಡೂವರೆ ವರ್ಷಗಳ ಬಳಿಕ ಬುಧವಾರದಂದು ಮೊದಲ ಬಾರಿಗೆ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ.
ಯೋಗಿ ಸಂಪುಟಕ್ಕೆ 23 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು ಈ ಪೈಕಿ 18 ಮಂದಿ ಹೊಸಬರು ಎಂಬುದು ಗಮನಾರ್ಹ. ಇದರ ಮಧ್ಯೆ ಹಿರಿಯ ಸಚಿವರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
75 ವರ್ಷ ಮೀರಿದವರಿಗೆ ಯಾವುದೇ ಸ್ಥಾನಮಾನ ನೀಡಬಾರದೆಂಬ ಅಲಿಖಿತ ನಿಯಮವನ್ನು ಬಿಜೆಪಿ ಹೊಂದಿದ್ದು, ಹೀಗಾಗಿ ಇತ್ತೀಚೆಗಷ್ಟೇ ತಮ್ಮ 75ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಹಣಕಾಸು ಸಚಿವ ರಾಜೇಶ್ ಅಗರವಾಲ್, ಸ್ವಯಂ ಪ್ರೇರಿತರಾಗಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 25 ವರ್ಷಗಳಿಂದ ಶಾಸಕರಾಗಿರುವ ರಾಜೇಶ್ ಅಗರವಾಲ್ ಆರೋಗ್ಯ ಸಮಸ್ಯೆಯನ್ನು ಮುಂದಿಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

Comments
Post a Comment