ಈಶ್ವರಪ್ಪ, ಕಾರಜೋಳ ಮತ್ತು ಅಶ್ವಥ್ ನಾರಾಯಣ ಇವರಿಗೆ ಬಂಪರ್ ಅಫರ್ ನೀಡಿದ ನೂತನ ಸರ್ಕಾರ !!


ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೊತೆ ಸರ್ಕಾರ ನಡೆಸಲು ಮೂವರು ಡಿಸಿಎಂಗಳನ್ನು ಆಯ್ಕೆ ಮಾಡಲಾಗುತ್ತಿದೆ ಎನ್ನಲಾಗಿದೆ.

ಬಿಜೆಪಿ ಭವಿಷ್ಯದ ದೃಷ್ಟಿಯಿಂದ ಈ ನೇಮಕ ಮಾಡಲಾಗುತ್ತಿದೆ. ಯಡಿಯೂರಪ್ಪನವರಿಗೆ 76 ವರ್ಷದ ಗಡಿ ದಾಟಿದೆ. ಬಿಜೆಪಿಯಲ್ಲಿ 75 ವರ್ಷ ಮೀರಿದವರಿಗೆ ಆಡಳಿತಾತ್ಮಕ ಹುದ್ದೆ ನೀಡುತ್ತಿಲ್ಲ. ಬಿ.ಎಸ್.ವೈ.ಗೆ ಮಾತ್ರ 75 ವರ್ಷದ ನಿಯಮದಿಂದ ವಿನಾಯಿತಿ ನೀಡಲಾಗಿದೆ.

ಪಕ್ಷ ಸಂಘಟನೆ ದೃಷ್ಟಿಯಿಂದ ಮುಂದೆ ನಾಯಕತ್ವ ಬೆಳೆಸಲು ಅನುಕೂಲವಾಗಬೇಕು. ಇದಕ್ಕಾಗಿ ಹೊಸ ನಾಯಕತ್ವವನ್ನು ಹಿಂದೆಂದಿಗಿಂತ ಈಗ ಹುಟ್ಟುಹಾಕುವುದು ಹೆಚ್ಚು ಅನಿವಾರ್ಯವಾಗಿದೆ. ಆದರೂ ಇದರ ಹಿಂದೆ ಬೇರೆಯದೇ ಆದ ಯೋಚನೆ ಇದೆ ಎನ್ನಲಾಗಿದ್ದು, ಯಡಿಯೂರಪ್ಪ ಅವರಿಗೆ ಕಡಿವಾಣ ಹಾಕಲು ಪ್ರತ್ಯೇಕ ಪವರ್ ಸೆಂಟರ್ ಸೃಷ್ಟಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಇಲ್ಲದಿದ್ದರೆ ಯಡಿಯೂರಪ್ಪ ಹಿಡಿತಕ್ಕೆ ಸಿಗುವುದಿಲ್ಲ

Comments