ನನಗೆ ಗೃಹಖಾತೆ ಬೇಡವೇ ಬೇಡ ಎಂದು ಹಠ ಹಿಡಿದ ಯಡಿಯೂರಪ್ಪ ಸೈನ್ಯದ ನೂತನ ಸಚಿವ


ಮುಖ್ಯಮಂತ್ರಿ ಸ್ಥಾನದ ನಂತರ ಅತ್ಯಂತ ಮಹತ್ವದ ಹುದ್ದೆ ಎನಿಸಿದ ಗೃಹ ಖಾತೆ ಬಿಜೆಪಿ ಸರ್ಕಾರದಲ್ಲಿ ಯಾರಿಗೂ ಬೇಡವಾದ ಅನಾಥ ಖಾತೆಯಾಗಿದೆ. ಸಂಪುಟಕ್ಕೆ ಸೇರ್ಪಡೆಯಾಗಿರುವ ಅನೇಕ ಸಚಿವರು ಸಂಪನ್ಮೂಲ ಖಾತೆಗಳ ಮೇಲೆ ಕಣ್ಣಿಟ್ಟಿರುವುದರಿಂದ ಗೃಹ ಖಾತೆಯನ್ನು ವಹಿಸಿಕೊಳ್ಳಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ.

ಕಾನೂನು ಮತ್ತು ಸುವ್ಯವಸ್ಥೆ ಹೊಣೆಗಾರಿಕೆ ಹೊತ್ತಿರುವ ಗೃಹ ಇಲಾಖೆಯನ್ನು ವಹಿಸಿಕೊಳ್ಳಲು ಎಲ್ಲರೂ ಮೀನಾಮೇಷ ಎಣಿಸುತ್ತಿದ್ದಾರೆ. ಸಂಪುಟ ವಿಸ್ತರಣೆಯಾಗಿ ಆರು ದಿನ ಕಳೆಯುತ್ತಾ ಬಂದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರಿಗೆ ಗೃಹ ಖಾತೆಯನ್ನು ಯಾರಿಗೆ ವಹಿಸಬೇಕು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಈ ಮೊದಲು ಔಪಚಾರಿಕವಾಗಿ ಸಚಿವರ ಬಳಿ ಪ್ರಸ್ತಾವನೆ ಮಾಡಿದಾಗ ಯಾರೊಬ್ಬರೂ ಗೃಹ ಖಾತೆ ವಹಿಸಿಕೊಳ್ಳುವ ಬಗ್ಗೆ ಒಲವು ತೋರಿಲ್ಲ.

Comments