ಮತ್ತೆ 7 ನೂತನ ಸಚಿವರನ್ನು ಘೋಷಿಸಿದ ಯಡಿಯೂರಪ್ಪ 17+7 , ನಾಳೆ ಪ್ರಮಾಣ ವಚನ, ನಾಳೆಯೇ ಖಾತೆಗಳ ಹಂಚಿಕೆ


25-ನೂತನ ಸಚಿವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಾತೆಗಳನ್ನು ಹಂಚಿಕೆ ಮಾಡಿದ್ದು, ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಟ್ಟಿದ್ದಾರೆ. ಸಂಜೆ ವೇಳೆಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ಮುಖ್ಯಮಂತ್ರಿಯವರು ಕಳುಹಿಸಿ ಕೊಟ್ಟಿರುವ ಪಟ್ಟಿಗೆ ಅಂಕಿತ ಹಾಕಲಿದ್ದಾರೆ. ಸಂಜೆಯೊಳಗೆ ಬಹುತೇಕ ಸಚಿವರ ಖಾತೆಗಳು ಬಹಿರಂಗಗೊಳ್ಳಲಿವೆ.
ಬಿಜೆಪಿ ಹಿರಿಯ ನಾಯಕ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ನಿನ್ನೆ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾದ ಕಾರಣ ಖಾತೆಗಳ ಹಂಚಿಕೆ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು. ಸಂಜೆ ಜೇಟ್ಲಿಯವರ ಅಂತ್ಯಕ್ರಿಯೆ ಮುಗಿದ ನಂತರ ರಾಜ್ಯಪಾಲರು ಅಧಿಕೃತವಾಗಿ ಸಚಿವರ ಖಾತೆಗಳ ಪಟ್ಟಿಗೆ ಅಂಕಿತ ಹಾಕಲಿದ್ದಾರೆ.
ಅರುಣ್ ಜೇಟ್ಲಿಯವರ ಅಂತ್ಯಕ್ರಿಯೆಗೆ ತೆರಳುವ ಮುನ್ನ ಯಡಿಯೂರಪ್ಪ 17 ಸಚಿವರಿಗೆ ಖಾತೆಗಳ ಜವಾಬ್ದಾರಿ ಹಂಚಿಕೆ ಮಾಡಿ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಿಕೊಟ್ಟಿದ್ದಾರೆ.

Comments