ಸಿಎಂ ಗೆ ಮತ್ತೊಂದು ದೊಡ್ಡ ಪೆಟ್ಟು ಕೊಟ್ಟ ಹೈಕಮಾಂಡ್ !! ದೆಲ್ಲಿಯಿಂದ ಬಂತು 3 ಡಿಸಿಎಂ ಫೈನಲ್ ಲೀಸ್ಟ್ !! BSY ಆಪ್ತನಿಗೆ ದಕ್ಕಲಿಲ್ಲ ಡಿಸಿಎಂ ಪಟ್ಟ



ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತ್ರ,ಕಳೆದ ಮಂಗಳವಾರದಂದು ನೂತನ ಸಚಿವರಾಗಿ 17 ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೇ ಇದೀಗ ಖಾತೆ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದ್ದು, ಸಿಎಂ ಯಡಿಯೂರಪ್ಪ ಅವರಿಗೆ ಮತ್ತೊಂದು ಶಾಕ್ ಕೊಡಲು ಹೈಕಮಾಂಡ್ ಮುಂದಾಗಿದೆ. ಡಿಸಿಎಂ ಹುದ್ದೆಯ ಲೀಸ್ಟ್ ನಲ್ಲಿ ಅಚ್ಚರಿಯ ಹೆಸರುಗಳಿದ್ದು, ಈ ಮೂಲಕ ಸಿಎಂ ಗೆ ಶಾಕ್ ನೀಡಿದೆ.
ಅಂತೂ ಇಂತೂ ಬಿಜೆಪಿ ಸರ್ಕಾರದ ನೂತನ ಸಚಿವ ಸಂಪುಟ ರಚನೆಯಾದರೂ, ಇದೀಗ ಖಾತೆ ಹಂಚಿಕೆಯದ್ದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಬಿಜೆಪಿ ಸರ್ಕಾರದಲ್ಲಿ ಮೂವರು ಡಿಸಿಎಂ ಗಳಿಗೆ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಆ ಹುದ್ದೆಗೆ ಯಾರಾಗಲಿದ್ದಾರೆ ಎಂಬುದು ಇದೀಗ ತೀವ್ರ ಚರ್ಚೆಗೆ ಒಳಗಾಗುತ್ತಿದೆ.
ಈ ನಡುವೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಡಿಸಿಎಂ ಹುದ್ದಿಗೆ ನೂತನ ಪಟ್ಟಿ ರಚಿಸುವಂತೆ ಸೂಚಿಸಿದ್ದಲ್ಲದೇ, ಆ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಅಚ್ಚರಿಯ ವ್ಯಕ್ತಿಯನ್ನು ಸೇರಿಸುವ ಮೂಲಕ, ಸಿಎಂಗೆ ಶಾಕ್ ನೀಡಿದೆ.


Comments