ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ ಮಾಡಲಾಗಿದೆ. ಒಟ್ಟು 17 ಹೊಸ ಸಚಿವರಿಗೆ ಖಾತೆ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಬಿ.ಎಸ್.ಯಡಿಯೂರಪ್ಪ ಅವರು ಅಳೆದು ತೂಗಿ 17 ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿತ್ತು, ಇದೀಗ ಖಾತೆ ಹಂಚಿಕೆಯಲ್ಲೂ ಸಹ ಸಚಿವರ ಸಾಮರ್ಥ ಅನುಗುಣವಾಗಿ ಖಾತೆ ನೀಡಿದ್ದಾರೆ. ಹಾಗಾದ್ರೆ ಯಾರಿಗೆ ಯಾವ ಖಾತೆ ಎನ್ನುವುದು ಈ ಕೆಳಗಿನಂತಿದೆ.
1) ಬಸವರಾಜ ಬೊಮ್ಮಾಯಿ- ಗೃಹ
2) ಕೆ.ಎಸ್.ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
3) ವಿ.ಸೋಮಣ್ಣ- ವಸತಿ ಖಾತೆ
4) ಆರ್.ಅಶೋಕ್- ಕಂದಾಯ
5) ಲಕ್ಷ್ಮಣ ಸವದಿ- ಸಾರಿಗೆ
6) ಜಗದೀಶ್ ಶೆಟ್ಟರ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
7) ಅಶ್ವಥ್ ನಾರಾಯಣ್ - ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ
8)ಗೋವಿಂದ ಕರಜೋಳ- ಲೋಕೋಪಯೋಗಿ ಖಾತೆ- ಹೆಚ್ಚುವರಿಯಾಗಿ ಸಮಾಜ ಕಲ್ಯಾಣ ಖಾತೆ
9) ಮಾಧುಸ್ವಾಮಿ- ಸಣ್ಣ ನೀರಾವರಿ ಮತ್ತು ಕಾನೂನು, ಸಂಸದೀಯ ವ್ಯವಹಾರ
10) ಶ್ರೀರಾಮುಲು- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
11) ಸಿಸಿ ಪಾಟೀಲ್- ಗಣಿ ಮತ್ತು ಭೂವಿಜ್ಞಾನ
12) ಸುರೇಶ್ ಕುಮಾರ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
13) ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಕಲ್ಯಾಣ
14) ಪ್ರಭೂ ಚೌವ್ಹಾಣ್- ಪಶು ಸಂಗೋಪನೆ
15) ಕೋಟಾ ಶ್ರೀನಿವಾಸ ಪೂಜಾರಿ - ಬಂದರು ಮತ್ತು ಮೀನುಗಾರಿಕೆ
16) ಸಿಟಿ.ರವಿ- ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ ಇಲಾಖೆ
17) ನಾಗೇಶ್- ಅಬಕಾರಿ

Comments
Post a Comment