ಉಪಚುನಾವಣೆ !! ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಮಾಡಿದ ಪ್ಲಾನ್ ಕೇಳಿ ಬೆರಗಾದ ಕಾಂಗ್ರೆಸಿಗರು


ಕೋಲಾರ: ಹೊಸಕೋಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಮಂಜುನಾಥ್ ಗೌಡ ಕಣಕ್ಕಿಳಿಸೋ ಚಿಂತನೆ ಹಿನ್ನೆಲೆ ಸ್ವ-ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ಹಣೆಯಲು ಕಾಂಗ್ರೆಸ್ ಮಾಡಿದ್ದ ಮಾಸ್ಟರ್ ಪ್ಲಾನ್ ಪ್ಲಾಪ್ ಆಗಿದೆ.

ಕೋಲಾರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಮಂಜುನಾಥ್ ಗೌಡ ಮಾಜಿ ಮಾಲೂರು ಜೆಡಿಎಸ್ ಶಾಸಕರಾಗಿದ್ದು, ಪ್ರಭಾವಿ ಕಾಂಗ್ರೆಸ್ ಮುಖಂಡರಿಂದ ಅವರಿಗೆ ಆಹ್ವಾನ ನೀಡಲಾಗಿತ್ತು. ಹೊಸಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿಸಲು ಆಹ್ವಾನ ಬಂದಿತ್ತು. ಆದರೆ, ಆ ಆಹ್ವಾನವನ್ನು ನಾನು ತಿರಸ್ಕಾರ ಮಾಡಿದ್ದೇನೆ ಎಂಬ ಅರ್ಥದಲ್ಲಿ ಅವರು ಹೇಳಿದ್ದಾರೆ.

ಆರ್. ಅಶೋಕ್ ಸಮ್ಮುಖದಲ್ಲಿ ಮುಂದಿನವಾರ ಮಂಜುನಾಥ್ ಗೌಡ ಅವರಿಗೆ ಬಿಜೆಪಿಗೆ ಸೇರಿಸಿಕೊಳ್ಳುವ ಸಾಧ್ಯತೆಯಿದ್ದು, ಕಾಂಗ್ರೆಸ್ ಆಹ್ವಾನ ನೀಡ್ತಿದ್ದಂತೆ ಮಾಲೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ನೀಡುವ ಭರವಸೆ ಖಾತರಿಯಾಗಿದೆ. ಮಂಜುನಾಥ್ ಗೌಡರನ್ನ ಬಿಜೆಪಿಗೆ ಸೆಳೆಯಲು ಸಂಸದ ಮುನಿಸ್ವಾಮಿ ಯಶಸ್ವಿಯಾಗಿದ್ದಾರೆ.

ಇನ್ನು ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಅವರು ಮಾಲೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ತೊರೆದು ಬಿಜೆಪಿ ಸೇರುತ್ತಾರೆ ಎಂಬ ಮಾತಿಗೆ ಮಾಲೂರಿನಲ್ಲಿ ಜೆಡಿಎಸ್ ಮುಖಂಡ ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ.

Comments