ಬಿಜೆಪಿ ಶಾಸಕ ಪ್ರಣವ್ ಸಿಂಗ್ ಚಾಂಪಿಯನ್ನನ್ನು 6 ವರ್ಷದ ಕಾಲ ಬಿಜೆಪಿ ಪಕ್ಷದಿಂದ ಉಚ್ಛಾಟಿಸಲಾಗಿದೆ.
ಇತ್ತೀಚಿಗೆ ಮನೆಯಲ್ಲಿ ನಡೆದ ಪಾರ್ಟಿಯೊಂದರ ವೇಳೆ ಪಿಸ್ತೂಲು, ಬಂದೂಕಿನೊಂದಿಗೆ ಮದ್ಯ ಸೇವಿಸಿ ನೃತ್ಯ ಮಾಡಿದ್ದ ಬಿಜೆಪಿ ಶಾಸಕ ಪ್ರಣವ್ ಸಿಂಗ್ ಚಾಂಪಿಯನ್ ಅವರ ವಿಡಿಯೋ ವೈರಲ್ ಆಗಿತ್ತು.
ಅದಕ್ಕೂ ಮುನ್ನ ಸಾರ್ವಜನಿಕವಾಗಿ ದುರ್ನಡತೆ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಅವರ ಮೇಲೆ ಪಕ್ಷದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು. ಇದೀಗ ಅವರನ್ನು ಪಕ್ಷದಿಂದ 6 ವರ್ಷ ಕಾಲ ಉಚ್ಛಾಟಿಸುವ ಮೂಲಕ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಬಿಜೆಪಿ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಅನಿಲ್ ಬಲೂನಿ ತಿಳಿಸಿದ್ದಾರೆ

Comments
Post a Comment