ಜೋರಾಯಿತು ರಾಜಕೀಯ, ಸದ್ದಿಲ್ಲದೆ ಪಕ್ಷ ಬಿಟ್ರು ಶಾಸಕರು !! ಒಂದಲ್ಲಾ ಎರಡಲ್ಲಾ 50 ಶಾಸಕರು ಬಿಜೆಪಿ ತೆಕ್ಕೆಗೆ !! ಇಲ್ಲಿದೆ ಫುಲ್ ಲಿಸ್ಟ್


ವರ್ಷದ ಅಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆ ಎಂದ ಮೇಲೆ ಪಕ್ಷಾಂತರ ಪರ್ವವೂ ಜೋರಾಗಿರುತ್ತದೆ.

ವಿಧಾನಸಭೆ ಚುನಾವಣೆಗಾಗಿ ತಯಾರಿ ನಡೆಸಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಎನ್.ಸಿ.ಪಿ.ಯಿಂದ 50 ಶಾಸಕರನ್ನು ಆಮದು ಮಾಡಿಕೊಳ್ಳಲು ಮುಂದಾಗಿದೆ.

ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಪ್ರತಿಪಕ್ಷಗಳ ಶಾಸಕರನ್ನು ಬಿಜೆಪಿ ಖರೀದಿಸುತ್ತಿದೆ ಎಂದು ಎನ್.ಸಿ.ಪಿ. ಮುಖ್ಯಸ್ಥ ಶರದ್ ಪವಾರ್ ಆರೋಪ ಮಾಡಿದ್ದು, ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಹಿರಿಯ ಸಚಿವ ಗಿರೀಶ್ ಮಹಾಜನ್, ಎನ್.ಸಿ.ಪಿ. ಮತ್ತು ಕಾಂಗ್ರೆಸ್ ಪಕ್ಷದ ಕನಿಷ್ಠ 50 ಶಾಸಕರು ಬಿಜೆಪಿಗೆ ಸೇರಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈಗಾಗಲೇ ಹಲವು ನಾಯಕರು ಬಿಜೆಪಿಗೆ ಸೇರಿದ್ದು, ಇನ್ನೂ ಹಲವರು ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಬೆಳವಣಿಗೆಯಿಂದ ಕಾಂಗ್ರೆಸ್ ಮತ್ತು ಎನ್.ಸಿ.ಪಿ. ವಲಯದಲ್ಲಿ ತಲ್ಲಣ ಮೂಡಿದೆ.

Comments