ಬಿಜೆಪಿಗೆ ಸೇರುತ್ತೇವೆ ಎಂದು ಕುಮಾರಸ್ವಾಮಿ ಗೆ ಫೋನ್ ಮೂಲಕ ತಿಳಿಸಿದ 4 ಜನ ಶಾಸಕರು !! ಕೊನೆಗೂ ಬಿಜೆಪಿ ಬಾಗಿಲಲ್ಲಿ



ರಾಜೀನಾಮೆ ನೀಡಿರುವ ಶಾಸಕರನ್ನು ಹೊರತುಪಡಿಸಿ ವಿಧಾನಸಭೆಯಲ್ಲಿ 34 ಸದಸ್ಯ ಬಲ ಹೊಂದಿರುವ ಜೆಡಿಎಸ್‌ ಈಗ ಕವಲು ಹಾದಿಯಲ್ಲಿ ನಿಂತಿದೆ. ಅಧಿಕಾರ ಕಳೆದುಕೊಂಡು ಮೂರು ದಿನಕ್ಕೇ ಜೆಡಿಎಸ್‌ ಶಾಸಕರು ಎರಡು ಬಣಗಳಾಗಿದ್ದಾರೆ. ಒಂದು ಬಣ ಬಿಜೆಪಿಗೆ ಬೆಂಬಲ ನೀಡುವಂತೆ ಆಗ್ರಹಿಸಿದರೆ, ಇನ್ನೊಂದು ಬಣ ಪ್ರತಿಪಕ್ಷದಲ್ಲಿ ಕೂರುವಂತೆ ಒತ್ತಾಯಿಸಿದೆ. ಕೆಲವೇ ದಿನಗಳಲ್ಲಿ ಇದಕ್ಕೊಂದು ಸ್ಪಷ್ಟ ರೂಪ ದೊರೆಯುವ ಸಾಧ್ಯತೆಯಿದೆ.
ಬೆಂಗಳೂರು: ದೋಸ್ತಿ ಸರಕಾರ ಪತನಗೊಂಡು ಬಿ.ಎಸ್‌ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರರಚನೆಯಾಗುತ್ತಿದ್ದಂತೆಯೇ ಜೆಡಿಎಸ್‌ ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರುತ್ತಿರುವ ಸೂಚನೆಗಳು ಲಭ್ಯವಾಗಿವೆ. ಇದರೊಂದಿಗೆ ರಾಜಕೀಯ ಬೆಳವಣಿಗೆಗೆ ಮತ್ತೊಂದು ತಿರುವು ದೊರೆತಂತಾಗಿದೆ. 
ಕುಮಾರಸ್ವಾಮಿ ಅವರು ವಾಸ್ತವ್ಯ ಹೂಡಿರುವ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಜೆಡಿಎಸ್‌ ಶಾಸಕರ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ಶಾಸಕರಲ್ಲಿ ಎರಡು ಬಣಗಳಾಗಿದ್ದು, ಒಂದು ಬಣ ಬಿಜೆಪಿ ಸರಕಾರದ ಜತೆ ಮೈತ್ರಿ ಮಾಡಿಕೊಳ್ಳುವಂತೆ ಅಥವಾ ಬಾಹ್ಯ ಬೆಂಬಲ ನೀಡುವಂತೆ ಒತ್ತಾಯಿಸಿದೆ. ಮತ್ತೊಂದು ಬಣ ಪ್ರತಿಪಕ್ಷದಲ್ಲಿ ಕೂರುವ ಬಗ್ಗೆ ಚಿಂತನೆ ನಡೆಸಿದೆ.
ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಚಿವ ಜಿ.ಟಿ ದೇವೇಗೌಡ, ಬಿಜೆಪಿ ಪರವಿರುವ ಗುಂಪು ಪ್ರಬಲವಾಗಿಯೇ ತನ್ನ ವಾದ ಮಂಡಿಸಿತು ಎಂದು ತಿಳಿಸಿದರು.
'ಕೊನೆಗೆ ಅಂತಿಮ ತೀರ್ಮಾನವನ್ನು ಕುಮಾರಸ್ವಾಮಿ ಅವರಿಗೇ ಬಿಡಲಾಗಿದೆ. ಅವರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ' ಎಂದು ಜಿ.ಟಿ ದೇವೇಗೌಡ ತಿಳಿಸಿದರು. 

Comments