ಟ್ರಬಲ್ ಶೂಟರ್ಗೆ ಶುರು ಆಯ್ತು ಗಂಡಾಂತರ !! ಡಿಕೆಶಿ ವಿರುದ್ಧ ನಿಂತಿತು ನ್ಯಾಯಾಲಯ !! ಶಿಕ್ಷೆ



ಜಲಸಂಪನ್ಮೂಲ ಸಚಿವ, ಕರ್ನಾಟಕ ದೋಸ್ತಿ ಸರಕಾರದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರಿಗೆ ಟ್ರಬಲ್ ಶುರುವಾಗಿದೆ.
ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರದ ಆದೇಶ ಡಿಕೆಶಿ ಆತಂಕಕ್ಕೆ ಮೂಲ ಕಾರಣ. ಹವಾಲ, ಹೈಕಮಾಂಡ್ ಕಪ್ಪ, ತೆರಿಗೆ ವಂಚನೆ ಆರೋಪದಿಂದ‌ ಕೈಬಿಡುವಂತೆ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ  ವಜಾ ಮಾಡಿದೆ.
ಯಾವ ಪ್ರಕರಣ?: 3 ಪ್ರಕರಣಗಳಿಂದ ಮುಕ್ತರಾಗಿದ್ದ ಡಿಕೆಶಿಗೆ 4ನೇ ಪ್ರಕರಣದಲ್ಲಿ ಸಂಕಷ್ಟ ಎದುರಾಗಿದೆ. ಪ್ರಕರಣದಿಂದ ಡಿಕೆಶಿ ಹೆಸರು ಕೈಬಿಡಲು ನ್ಯಾಯಾಧೀಶ ರಾಮಚಂದ್ರ ಹುದ್ದರ್  ನಿರಾಕರಿಸಿದ್ದಾರೆ. ಹಾಗಾಗಿ ಡಿಕೆಶಿ ಮೇಲಿನ ಪ್ರಕರಣದ ವಿಚಾರಣೆ ಮುಂದುವರಿಯಲಿದೆ.
ಡಿ.ಕೆ.ಶಿವಕುಮಾರ್ ದೆಹಲಿ ಫ್ಲ್ಯಾಟ್ ನಲ್ಲಿ ಸಿಕ್ಕಿದ್ದ ಹಣ ಸಿಕ್ಕಿದ್ದ ಪ್ರಕರಣ ಸಂಕಷ್ಟ ತಂದಿದೆ.  ಐಟಿ ಇಲಾಖೆ ದಾಖಲಿಸಿದ್ದ ನಾಲ್ಕನೇ ಪ್ರಕರಣ ಡಿಕೆಶಿಗೆ ಸತ್ತಿಕೊಂಡಿದೆ. ಆಗಸ್ಟ್ 2017 ರಲ್ಲಿ ಡಿಕೆಶಿಗೆ ಸಂಬಂಧಿಸಿದ್ದ ವಿವಿಧ ಆಸ್ತಿಗಳ  ಮೇಲೆ  ದಾಳಿ ನಡೆಸಿದ್ದ ಐಟಿ ಇಲಾಖೆ ಪ್ರಕರಣ ದಾಖಲಿಸಿಕೊಂಡಿತ್ತು.

Comments