ಮೋದಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬೇಡಿಕೆ ಇಟ್ಟ ಬಲಿಷ್ಠ ದೇಶದ ಪ್ರಧಾನಿ !! ಮೋದಿ ಎಷ್ಟು ಒಳ್ಳೆಯವರು ಎಂದು...click
ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ, ಆಸ್ಟ್ರೆಲೀಯಾ ಪ್ರಧಾನಿ ಸ್ಕಾಟ್ ಮಾರಿಸನ್ ಕ್ಲಿಕ್ಕಿಸಿರುವ ಸೆಲ್ಫಿ ಇದೀಗ ಭಾರೀ ಸದ್ದು ಮಾಡುತ್ತಿದೆ.
ಸಮ್ಮೇಳನದ ಸಭಾಂಗಣದಲ್ಲಿ ಮೋದಿ ಅವರನ್ನು ಕಂಡ ಮಾರಿಸನ್, ಕೂಡಲೇ ತಮ್ಮ ಮೊಬೈಲ್ ಫೋನ್ ಹೊರತೆಗೆದು ಸೆಲ್ಫಿಗಾಗಿ ಬೇಡಿಕೆ ಇಟ್ಟರು. ಆಸೀಸ್ ಪ್ರಧಾನಿ ಜೊತೆ ನಗುನಗುತ್ತಾ ಮೋದಿ ಸೆಲ್ಫಿಗೆ ಪೋಸ್ ನೀಡಿದರು.
ಈ ಫೊಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಸ್ಕಾಟ್ ಮಾರಿಸನ್, ಕಿತ್ನಾ ಅಚ್ಛಾ ಹೈ ಮೋದಿ(ಮೋದಿ ಅದೆಷ್ಟು ಒಳ್ಳೆಯವರು) ಎಂದು ಹಿಂದಿಯಲ್ಲಿ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.
ಮೋದಿ-ಮಾರಿಸನ್ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಎರಡೂ ರಾಷ್ಟ್ರಗಳಲ್ಲಿ ಈ ಫೋಟೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಮೋದಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬೇಡಿಕೆ ಇಟ್ಟ ಬಲಿಷ್ಠ ದೇಶದ ಪ್ರಧಾನಿ !! ಮೋದಿ ಎಷ್ಟು ಒಳ್ಳೆಯವರು ಎಂದು...click


Comments
Post a Comment