ಕನ್ನಡದ ಕಣ್ಮಣಿ ಉದಾರ ಮನಸ್ಸಿ ನ ನಾಯಕ
ಸ್ಯಾಂಡಲ್ ವುಡ್ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂದೆ ಓದಿ ಚಂದ್ರುರವರಿಗೆ ಭಾರೀ ಹೆಸರನ್ನು ತಂದು ಕೊಟ್ಟ ‘ಮುಖ್ಯಮಂತ್ರಿ’ ನಾಟಕ ಎರಡು ದಿನಗಳ ಹಿಂದೆ ಅಂದರೆ ಜೂ. 22 ರಂದು ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ನಡೆಯುವುದಿತ್ತು. ನಾಟಕ ಶುರುವಾಗುವ 15 ನಿಮಿಷಗಳ ಮುನ್ನ ಚಂದ್ರುರವರು ಕುಸಿದು ಬಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆಗ ಹೃದಯದಲ್ಲಿ ಬ್ಲಾಕೆಜ್ ಆಗಿರುವುದಾಗಿ ತಿಳಿದು ಬಂದಿದೆ. ಹಾಗಾಗಿ ಇಂದು ಜಯದೇವ ಆಸ್ಪತ್ರೆಯಲ್ಲಿ ಆ್ಯಂಜಿಯೋಗ್ರಾಮ್ ನಡೆಯಲಿದೆ.
ಪ್ರಸ್ತುತ ಮುಖ್ಯಮಂತ್ರಿ ಚಂದ್ರು ಅಗ್ನಿಸಾಕ್ಷಿ ಧಾರಾವಾಹಿ ಹಾಗೂ ಡ್ರಾಮಾ ಜೂನಿಯರ್ಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


Comments
Post a Comment