ಆಪರೇಷನ್ ಕಮಲ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಗೋವಾದ ಕಾಂಡೊಲಿಮ್ ನ ತಾಜ್ ಫೋರ್ಟ್ ಅಗೌಡ ಮತ್ತು ಕಿಂಗ್ ಫಿಶರ್ ವಿಲ್ಲಾ ಹೊಟೇಲ್ ಗಳಲ್ಲಿ 40 ರೂಂಗಳು ಬುಕ್ ಆಗಿವೆ. ಕೆಲವು ಕಾಂಗ್ರೆ ಸ್ ಮತ್ತು ಜೆಡಿಎಸ್ ನ ಅತೃಪ್ತ ಶಾಸಕರು ಯಾವುದೇ ಕ್ಷಣದಲ್ಲಿಯೂ ಹೊಟೇಲ್ ಗೆ ಹೋಗುವ ಸಾಧ್ಯತೆಯಿದೆ.
ಈ ಮಧ್ಯೆ ಮೈತ್ರಿ ಸರ್ಕಾರದ ಸಚಿವ ಸಂಪುಟದಲ್ಲಿ ಹಲವು ಅತೃಪ್ತ ಶಾಸಕರನ್ನು ಸಂಪುಟಕ್ಕೆ ಸೇರಿಸಲು ವೇದಿಕೆ ಸಿದ್ದವಾಗುತ್ತಿದೆ. ಬೆಳಗಾವಿಯ ಶಾಸಕ ಸುರೇಶ್ ಅಂಗಡಿ ಹಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುವ ಸಾಧ್ಯತೆಯಿದೆ ಎಂದು ಹೇಳಿಕೆ ನೀಡಿದ್ದಾರೆ.
ಈ ಮದ್ಯೆ ಬಿಜೆಪಿ ನಾಯಕರ ಒಂದು ವರ್ಗ ಸರ್ಕಾರವನ್ನು ಅಸ್ಥಿರಗೊಳಿಸಲು ಸರಿಯಾದ ಸಮಯಕ್ಕೆ ಕಾಯುತ್ತಿದೆ. ಪ್ರಧಾನಿಯಾಗಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ರಾಜ್ಯದಲ್ಲಿ ಬಿಜೆಪಿಯ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ಗೋವಾಕ್ಕೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಹಲವು ಕಾಂಗ್ರೆಸ್ ಶಾಸಕರು ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Comments
Post a Comment