breaking news !! ಮೋದಿ ಪ್ರಧಾನಿ ಆಗುತ್ತಲೇ ರಾಜಕೀಯಕ್ಕೆ ವಿದಾಯ ಹೇಳಿದ ಕೇಂದ್ರ ಸಚಿವ




ಕಳೆದ ಅವಧಿಯ ಬಿಜೆಪಿ ನೇತೃತ್ವದಕೇಂದ್ರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿಕಾರ್ಯ ನಿರ್ವಹಿಸಿದ್ದ ಅರುಣ್ ಜೇಟ್ಲಿ ನೂತನಸರ್ಕಾರದಲ್ಲಿ ತನಗೆ ಯಾವುದೇ ಮಹತ್ವದಜವಾಬ್ದಾರಿಗಳನ್ನು ನೀಡದಂತೆ ಪ್ರಧಾನಿ ಮೋದಿಗೆಪತ್ರ ಬರೆದಿದ್ದಾರೆ .
ಇದರ ಬೆನ್ನಲ್ಲೇ ಬುಧವಾರ ರಾತ್ರಿ ಜೇಟ್ಲಿ ನಿವಾಸಕ್ಕೆ ತೆರಳಿದ ಮೋದಿಯರು ತೀರ್ಮಾನ ಹಿಂಪಡೆಯಲು ಮನವಿ ಮಾಡಿದ್ದಾರೆ.
ನಿಮ್ಮಂತಹವರು ಸಂಪುಟದಲ್ಲಿ ಇರಬೇಕು. ನಿಮ್ಮನ್ನು ಖಾತೆ ರಹಿತ ಸಚಿವರಾಗಿ ಉಳಿಸಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ. ಅದಕ್ಕೆ ಜೇಟ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.
ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಅರುಣ್ ಜೇಟ್ಲಿ, ಕಳೆದ ಐದು ವರ್ಷಗಳ ಅವಧಿಯಲ್ಲಿ ನಾನು ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಒಬ್ಬನಾಗಿದ್ದು, ನನಗೆ ದೊಡ್ಡ ಗೌರವ ಹಾಗೂ ಸಾಕಷ್ಟು ಕಲಿತಿದ್ದೀನಿ. ಆದರೆ ಕಳೆದ 18 ತಿಂಗಳಿನಿಂದ ನನ್ನ ಆರೋಗ್ಯದಲ್ಲಿ ಗಂಭೀರ ಸಮಸ್ಯೆಗಳು ಎದುರಾಗಿವೆ. ಪ್ರಚಾರದ ವೇಳೆ ನನಗೆ ನೀಡಿದ್ದ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನಾದ್ರೂ, ಮುಂದೆ ನನಗೆ ಯಾವುದೇ ಜವಾಬ್ದಾರಿ ನೀಡದಂತೆ ಈ ಹಿಂದೆ ಮೌಖಿಕವಾಗಿ ಹೇಳಿದ್ದೆ. ಇದರಿಂದ ನನ್ನ ಆರೋಗ್ಯ ಹಾಗೂ ಚಿಕಿತ್ಸೆ ಮೇಲೆ ಗಮನ ಹರಿಸಲು ನೆರವಾಗುತ್ತದೆ ಎಂದಿದ್ದಾರೆ.

Comments